ಬೆಂಗಳೂರು : ನಗರದಲ್ಲಿ ಮನೆಗಳ ಬಾಡಿಗೆ ಗಗನಕ್ಕೇರುತ್ತಿದ್ದು. ಬಾಡಿಗೆ ಹೆಚ್ಚಾಗುತ್ತಿದ್ದಂತೆ ಮನೆಯ ಅಳೆತೆಯು ಕಡಿಮೆಯಾಗುತ್ತಿದೆ. ಈ ಕುರಿತು ಟೆಕ್ಕಿಯೋರ್ವ ಫ್ಲಾಟ್ ಟೂರ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಅಷ್ಟು ಸಣ್ಣ ಮನೆಗೆ 25,000 ವೆಚ್ಚವಾಗುತ್ತದೆ ಎಂದು ಹೇಳಿದ್ದಾನೆ.
ವಿಡಿಯೋದಲ್ಲಿ ಕೋಣೆಯ ಮಧ್ಯದಲ್ಲಿ ನಿಂತಿರುವ ವ್ಯಕ್ತಿ ತನ್ನ ಎರಡೂ ತೋಳುಗಳನ್ನು ಅಗಲವಾಗಿ ಚಾಚುವುದರೊಂದಿಗೆ ಪ್ರಾರಂಭವಾಗುತ್ತದೆ. ಹಾಸ್ಯಮಯ ಪ್ರದರ್ಶನದಲ್ಲಿ, ಅವನು ಎರಡೂ ಗೋಡೆಗಳನ್ನು ಏಕಕಾಲದಲ್ಲಿ ಸ್ಪರ್ಶಿಸುವಲ್ಲಿ ಯಶಸ್ವಿಯಾಗುತ್ತಾನೆ, ಫ್ಲಾಟ್‌ನ ಕಿರಿದಾದ ಅಗಲವನ್ನು ಎತ್ತಿ ತೋರಿಸುತ್ತಾನೆ. ನಂತರ ಅವನು ತನ್ನ ಪಾದಗಳಿಂದ ಒಂದು ಗೋಡೆಯನ್ನು ಸ್ಪರ್ಶಿಸುವ ಮೂಲಕ ಮತ್ತು ತನ್ನ ಕೈಯಿಂದ ಎದುರು ಗೋಡೆಗೆ ತಲುಪುವ ಮೂಲಕ ಕೋಣೆಯ ಉದ್ದವನ್ನು ವಿವರಿಸುತ್ತಾನೆ, ಜೊತೆಗೆ ಬಾಲ್ಕನಿಯನ್ನು ತೋರಿಸಿದ್ದು. ಒಬ್ಬ ವ್ಯಕ್ತಿ ನಿಲ್ಲುವಷ್ಟು ಜಾಗ ಮಾತ್ರ ಇದೆ.
ಇದನ್ನೂ ಓದಿ :EVM ಮೇಲೆ ನಂಬಿಕೆ ಇಲ್ಲ, ಕರ್ನಾಟಕದಲ್ಲಿ 185 ರಿಂದ 190 ಸೀಟ್ ಗೆಲ್ಲಬಹುದಿತ್ತು: ಶಿವರಾಜ್ ತಂಗಡಗಿ
ನಂತರ ಹಾಸ್ಯಾಸ್ಪದವಾಗಿ ಮಾತನಾಡಿರುವ ವ್ಯಕ್ತಿ ಈ ರೂಮ್ನಲ್ಲಿ ‘ನೀವು ಮತ್ತು ನಿಮ್ಮ ಗರ್ಲ್ಫ್ರೆಂಡ್ ಇರಬೇಕಾದರೆ ಇಬ್ಬರು ಶಿಫ್ಟ್ನಲ್ಲಿ ನಿದ್ದೆ ಮಾಡಬೇಕಾಗುತ್ತಿದೆ ಎಂದು ಹೇಳಿದ್ದು. ಅಷ್ಟು ಸಣ್ಣ ರೂಂಗೆ 25ಸಾವಿರ ಬಾಡಿಗೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಅನೇಕರು ಕಮೆಂಟ್ ಮಾಡಿದ್ದರೆ. ಇದರಲ್ಲಿ ಓರ್ವ ವ್ಯಕ್ತಿ ಇದಕ್ಕಿಂತ ದೊಡ್ಡದಾಗಿ ನಮ್ಮ ಶೌಚಾಲಯವಿದೆ ಎಂದು ವ್ಯಂಗ್ಯವಾಡಿದ್ದಾರೆ.