ಹುಬ್ಬಳ್ಳಿ : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದನು. ಆತನ ಶವವನ್ನು ಆ್ಯಂಬುಲೆನ್ಸ್ ಮೂಲಕ ಅಂತ್ಯಕ್ರಿಯೆ ಮಾಡಲು ಶರುವ ವೇಳೆ ಹೆಂಡತಿ ಸತ್ತ ಗಂಡನಿಗೆ ಡಾಬಾದ ಬಳಿ ಊಟ ಮಾಡುತ್ತೀಯ ಎಂದು ಕೇಳಿ ಗೋಳಾಡಿದ್ದಾಳೆ. ಈ ವೇಳೆ ಅಚ್ಚರಿಯ ರೀತಿಯಲ್ಲಿ ಸತ್ತ ವ್ಯಕ್ತಿ ಜೀವ ಪಡೆದಿದ್ದಾನೆ.
ಹೌದು..ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ನಡೆದ ಘಟನೆ ನಡೆದಿದ್ದು. ಬಂಕಾಪುರದ ಮಂಜುನಾಥ್ ನಗರದ ನಿವಾಸಿಯಾದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ ಕಳೆದ ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆಗೆಂದು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಿಷ್ಣಪ್ಪ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು.
ನಂತರ ಮೃತ ಬಿಷ್ಣಪ್ಪ ಅವರ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದರು. ಆದರೆ ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ ಶೀಲಾ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಗೋಳಾಡಿದ್ದಳು. ಈ ವೇಳೆ ಬಿಷ್ಣಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾನೆ.
ಇದನ್ನೂ ಓದಿ :ನಾಯಕತ್ವ ಎಂದರೆ ಕುರ್ತಾ-ಪೈಜಾಮ ಧರಿಸಿ ಭಾಷಣ ಮಾಡುವುದಲ್ಲ: ನರೇಂದ್ರ ಮೋದಿ
ಇದರಿಂದ ಗಾಬರಿಯಾದ ಸಂಬಂಧಿಕರು ಮತ್ತೆ ಶಿಗ್ಗಾವಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ತಪಾಸಣೆ ಮಾಡಿದ ವೈದ್ಯರು ವ್ಯಕ್ತಿ ಬದುಕಿರೋದಾಗಿ ಧೃಡಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಬಿಷ್ಣಪ್ಪನನ್ನು ಅದೇ ಆಂಬುಲೆನ್ಸ್ನಲ್ಲಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಷ್ಣಪ್ಪನಿಗೆ ಕಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆದರೆ ಇಷ್ಟೋತ್ತಿಗಾಗಲೇ ಬಿಷ್ಣಪ್ಪ ಸತ್ತನೆಂದು ಕುಟುಂಬಸ್ಥರು ಬಂಕಾಪುರದಲ್ಲಿ ಬ್ಯಾನರ್ಗಳನ್ನು ಹಾಕಿದ್ದರು.
ಮೃತನ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರು, ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಸತ್ತ ಸುದ್ದಿ ಪ್ರಚಾರ ಮಾಡಿದ್ದರು ಎಂದು ತಿಳಿದು ಬಂದಿದೆ.