ಗುಜರಾತ್ : ವಧುವಿನ ಕಡೆಯವರು ಊಟದ ವಿಚಾರದಲ್ಲಿ ಸರಿಯಾಗಿ ಉಪಚಾರ ಮಾಡಿಲ್ಲ ಎಂದು ಆರಂಭವಾದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಕೊನೆಗೆ ಪೊಲೀಸರು ಎರಡು ಕುಟುಂಬಗಳ ಮನವೊಲಿಸಿ ಠಾಣೆಯಲ್ಲೆ ಮದುವೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಹೌದು.. ಈ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದ್ದು. ಮದುವೆ ಮನೆಯಲ್ಲಿ ಊಟದ ಕೊರತೆಯಿಂದಾಗಿ ವರನ ಮನೆಯವರು ಮದುವೆ ಬೇಡವೆಂದು ಹೇಳಿದ್ದಾರೆ. ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡು ಇನ್ನೇನು ಮದುವೆ ಸಂಪನ್ನವಾಗಬೇಕು ಎನ್ನುವ ಸಮಯದಲ್ಲಿ ಜಗಳ ಏರ್ಪಟ್ಟಿದ್ದು. ವರನ ಕುಟುಂಬದವರ ವರ್ತನೆಯಿಂದ ಅಸಮಾಧಾನಗೊಂಡ ವಧುವಿನ ಕುಟುಂಬಸ್ಥರು ಸಹಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ :‘ಸಿಟಿ ಲೈಟ್ಸ್’ ಸಿನಿಮಾ ಮೂಲಕ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ವಿಜಯ್
ಘಟನೆ ಬಗ್ಗೆ ತಿಳಿದ ಪೊಲೀಸರು ಎರಡು ಕುಟುಂಬದ ಸದಸ್ಯರನ್ನು ಠಾಣೆಗೆ ಕರೆಸಿ ಸಂಧಾನ ನಡೆಸಿದ್ದಾರೆ. ನಂತರ ವರನ ಕುಟುಂಬಸ್ಥರು ಮದುವೆಗೆ ಒಪ್ಪಿಕೊಂಡಿದ್ದು. ಪೊಲೀಸ್ ಠಾಣೆಯಲ್ಲೆ ಮದುವೆ ನೆರವೇರಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಫೆಬ್ರವರಿ 7ರಂದು ಹಂಚಿಕೊಳ್ಳೊಲಾಗಿದೆ.