Saturday, February 8, 2025

ದೇವರು ಕೊಟ್ಟ ತಂಗಿಗೆ 5 ಕೋಟಿ ವರದಕ್ಷಿಣೆ ಕೊಟ್ಟ ಸಹೋದರರು

ರಾಜಸ್ಥಾನ : ನಾಗೌರ್‌ನಲ್ಲಿ ರೈತನ ಮೂವರು ಪುತ್ರರು ತಮ್ಮ ಸಹೋದರಿಗೆ ₹1.51 ಕೋಟಿ ನಗದು, ಚಿನ್ನ, ಬೆಳ್ಳಿ ಸೇರಿ ₹5 ಕೋಟಿಗೂ ಹೆಚ್ಚು ಮೌಲ್ಯದ ವರದಕ್ಷಿಣೆ ನೀಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗೌರ್‌ನಲ್ಲಿ ವರದಕ್ಷಿಣೆ ಪದ್ಧತಿಯ ಇತಿಹಾಸವನ್ನು ಚರ್ಚೆಗೆ ಗುರಿಪಡಿಸಿದೆ.

ರಾಜಸ್ಥಾನದಲ್ಲಿ ಪ್ರತಿದಿನ ಹಲವು ಮದುವೆಗಳು ನಡೆಯುತ್ತವೆ. ಮದುವೆಗಳಲ್ಲಿ ವಧು ಅಥವಾ ವರನ ಮಾವಂದಿರ ಕಡೆಯಿಂದ ನೀಡಲಾಗುವ ಉಡುಗೊರೆ ಯಾವಾಗಲೂ ಚರ್ಚೆಯಲ್ಲಿರುತ್ತದೆ. ವಿಶೇಷವಾಗಿ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ವಧು ಅಥವಾ ವರನ ಮಾವಂದಿರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

ಮೊಘಲರ ಕಾಲದಿಂದಲೂ ಮೈರಾ ಅಥವಾ ವರದಕ್ಷಿಣೆಯನ್ನ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದ್ದು. ಇದೀಗ ಮೂವರು ಸಹೋದರರು ತಂಗಿಗಾಗಿ ನೀಡಿದ ಉಡುಗೊರೆ ಚರ್ಚೆಯಲ್ಲಿದೆ. ರೈತನ ಪುತ್ರರು ತಮ್ಮ ಕಿರಿಯ ಸಹೋದರಿಗೆ 1 ಕೋಟಿ 51 ಲಕ್ಷ ರೂಪಾಯಿ ನಗದು ಮತ್ತು 25 ತೊಲೆ ಚಿನ್ನ ಮತ್ತು 5ಕೆಜಿ ಬೆಳ್ಳಿ ಸೇರಿದಂತೆ ಒಟ್ಟು ಮೌಲ್ಯ 5 ಕೋಟಿ ರೂ.ಗಳಿಗಿಂತ ಹೆಚ್ಚು ವರದಕ್ಷಿಣೆಯಾಗಿ ನೀಡಿದ್ದಾರೆ. ಎಲ್ಲರೂ ಅದನ್ನು ನೋಡಿ ಆಶ್ಚರ್ಯಚಕಿತರಾದರು.

ನಾಗೌರ್ ನಗರದ ಹನುಮಾನ್ ಬಾಗ್‌ನ ಸದೋಕನ್ ಹಾಲ್ ನಿವಾಸಿ ರಾಮಭಕ್ಷ್ ಖೋಜಾ ಅವರ ಮೂವರು ಪುತ್ರರಾದ ಹರ್ನಿವಾಸ್ ಖೋಜಾ (ಶಿಕ್ಷಕ), ದಯಾಳ್ ಖೋಜಾ (ಶಿಕ್ಷಕ) ಮತ್ತು ಹರ್ಚಂದ್ ಖೋಜಾ ಅವರು ತಮ್ಮ ಸಹೋದರಿ ಬಿರಾಜಯ ದೇವಿಗೆ ವರದಕ್ಷಿಣೆಯನ್ನು ಉದಾರವಾಗಿ ನೀಡಿದರು.

ಇದನ್ನೂ ಓದಿ :ಮುಸ್ಲೀಂ ಪ್ರಾಬಲ್ಯವಿದ್ದ ಕ್ಷೇತ್ರದಲ್ಲೂ ಬಿಜೆಪಿಗೆ ಭರ್ಜರಿ ಗೆಲುವು

ರಾಮಬಕ್ಷ ಖೋಜಾ ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು. ಇಬ್ಬರು ಗಂಡು ಮಕ್ಕಳು ಸರ್ಕಾರಿ ಶಿಕ್ಷಕರು ಮತ್ತು ಒಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮಬಕ್ಷ್ ಖೋಜಾ ತನ್ನ ಮೂವರು ಗಂಡು ಮಕ್ಕಳೊಂದಿಗೆ ನಾಗೌರ್‌ನ ಹನುಮಾನ್ ಬಾಗ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಒಬ್ಬಳೇ ಮಗಳು; ಅವರ ಮಗಳು ಜಯಲ್ ವಿಧಾನಸಭಾ ಕ್ಷೇತ್ರದ ಫರ್ದೌದ್ ನಿವಾಸಿ ಮದನ್ ಲಾಲ್ (ಶಿಕ್ಷಕ) ಅವರನ್ನು ಮದುವೆಯಾಗಿದ್ದಾಳೆ. ರಾಮಭಕ್ಷ್ ಖೋಜಾ ಕೃಷಿಕನಾಗಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜಸ್ಥಾನದಲ್ಲಿ ಉಡುಗೊರೆಯ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಯಾವುದೇ ಹುಡುಗ ಅಥವಾ ಹುಡುಗಿಯ ಮದುವೆಯಾದಾಗ ಅವರ ಮಾವಂದಿರು ಬಟ್ಟೆ, ಹಣ ಮತ್ತು ಇತರ ವಸ್ತುಗಳನ್ನು ತರುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಭಾತ್ ಎಂದೂ ಕರೆಯುತ್ತಾರೆ.

 

RELATED ARTICLES

Related Articles

TRENDING ARTICLES