ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷದ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಕಳೆದ 13 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್ ಹೀನಾಯವಾಗಿ ಸೋತಿದ್ದು. ಆಪ್ನ ಪ್ರಮುಖ ನಾಯಕ ಅರವಿಂದ ಕೇಜ್ರಿವಾಲ್ ಕೂಡ ಮಕಾಡೆ ಮಲಗಿದ್ದಾರೆ. ಬಿಜೆಪಿಯ ಈ ಪ್ರಚಂಡ ಗೆಲುವಿಗೆ ಕಾರಣವಾದ ಅಂಶಗಳೇನು ಎಂಬ ಕುರಿತು ಅನೇಕ ರಾಜಕೀಯ ಪರಿಣಿತರು ವಿಶ್ನೇಷಿಸುತ್ತಿದ್ದು. ಬಿಜೆಪಿ ಗೆಲುವಿಗೆ ಕಾರಣವಾದ ಕೆಲ ಅಂಶಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ.
ಬಿಜೆಪಿ ಉಚಿತ ಗ್ಯಾರಂಟಿ ಘೋಷಣೆಗಳು !
ಇಡೀ ದೇಶದಲ್ಲಿ ಫ್ರೀಬೀಸ್ಗಳನ್ನು ಆರಂಭಿಸಿದ ಖ್ಯಾತಿ ಆಮ್ಆದ್ಮಿಗೆ ಸಲ್ಲುತ್ತದೆ ಆದರೆ ಇವರ ನಂತರ ಕಾಂಗ್ರೆಸ್ ಇದೇ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿಕೊಂಡು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಧಿಕಾರ ಹಿಡಿಯಿತು. ಇದರ ನಂತರ ಇದೇ ಹಾದಿಗೆ ಬಂದ ಬಿಜೆಪಿಯು ಕಳೆದ ಅನೇಕ ಚುನಾವಣೆಯಲ್ಲಿ ಭರ್ಜರಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು. ದೆಹಲಿ ಚುನಾವಣೆಯಲ್ಲೂ ಘೋಷಿಸಿದೆ.
ಆಮ್ ಆದ್ಮಿ,ಕಾಂಗ್ರೆಸ್ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಜೊತೆಗೆ ಎಎಪಿ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಘೋಷಿಸಿತ್ತು. ಪ್ರಧಾನಿ ಮೋದಿಯವರೇ ಈ ಘೋಷಣೆ ಮಾಡಿದ್ದರು. ಇದು ಬಿಜೆಪಿಗೆ ಮತ ಚಲಾಯಿಸಿದರೆ ಬಡವರು ಯೋಜನೆಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಎಎಪಿಯ ಹೇಳಿಕೆಗೆ ಯಾವುದೇ ಮಹತ್ವ ಕೊಡದಂತೆ ಮಾಡಿತು.
ಇದನ್ನೂ ಓದಿ :ಹಣ ಮತ್ತು ಮದ್ಯದ ಮೇಲೆ ಗಮನ ಹರಿಸಿ ಕೇಜ್ರಿವಾಲ್ ಸೋತಿದ್ದಾನೆ: ಅಣ್ಣಾ ಹಜಾರೆ
ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ
ಎಎಪಿಯ ಜನಪ್ರಿಯತೆ ಕಡಿಮೆಯಾಗಲು ದೊಡ್ಡ ಕಾರಣವೆಂದರೆ ರಾಜಧಾನಿಯ ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ. ತುಂಬಿ ಹರಿಯುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ರಾಷ್ಟ್ರ ರಾಜಧಾನಿಯಾದ್ಯಂತ ಮತದಾರರನ್ನು ಕೆರಳಿಸಿತ್ತು. ಇದು ಕೂಡ ಆಮ್ ಆದ್ಮಿಗಳಿಗೆ ಸೋಲುಣಿಸಿತು.
ಕೇಜ್ರಿವಾಲ್ ಮೇಲಿನ ಅಬಕಾರಿ ಹಗರಣ ನೀತಿ !
ಅಬಕಾರಿ ಹಗರಣ ನೀತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಇಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲರನ್ನು ಜೈಲಿಗೆ ಅಟ್ಟಿತು. ಕೇವಲ ಕೇಜ್ರಿವಾಲ್ ಅಲ್ಲದೆ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ. ಹವಾಲ ಹಗರಣದಲ್ಲಿ ಸತ್ಯಂದ್ರೇ ಜಿತ್ ಸೇರಿದಂತೆ ಹಲವು ಆಪ್ ನಾಯಕರು ತಿಹಾರ್ ಜೈಲಿನ ಮುಖ ನೋಡಿ ಬಂದರು.
12ಲಕ್ಷದವರೆಗೆ ತೆರಿಗೆ ವಿನಾಯಿತಿ !‘
ಫೆಬ್ರವರಿ 01ರಂದು ನಿರ್ಮಲಾ ಸೀತಾರಾಮನ್ ಘೋಷಿಸಿದ ಕೇಂದ್ರ ಬಜೆಟ್ ಕೂಡ ದೆಹಲಿ ಚುನಾವಣೆಯ ಮೇಲೆ ಪರಿಣಾಮ ಬಿದ್ದಿದ್ದು. ಬಹುತೇಕ ಮಧ್ಯಮ ವರ್ಗದ ಜನರೆ ಇರುವ ದೆಹಲಿ ಜನರಿಗೆ ಇದು ಬಿಜೆಪಿ ಮೇಲೆ ಒಲವು ಮೂಡಲು ಸಾಧ್ಯವಾಗಿದೆ.
ಕೈಹಿಡಿದ ಜಾಟ್ ಸಮುದಾಯ !
ಕಳೆದ ವರ್ಷ ನಡೆದ ಹರಿಯಾಣ ಚುನಾವಣೆಯಲ್ಲಿ ಜಾಟ್ ಸಮುದಾಯದ ಮತಗಳು ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿರಲ್ಲ. ಆದರೆ ಇತರೆ ವರ್ಗದ ಜನರು ಬಿಜೆಪಿಯ ಕೈ ಹಿಡಿದ್ದರು. ಆದರೆ ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಜಾಟ್ ಸಮುದಾಯದ ಜನರು ಕೈ ಹಿಡಿದಿದ್ದು. ಇದು ಬಿಜೆಪಿಗೆ ಗೆಲುವಿಗೆ ಕಾರಣವಾಗಿದೆ.
ಇದನ್ನೂ ಓದಿ:ನಾವು ಗೆದ್ದಾಗ ಕಾಂಗ್ರೆಸ್ನವರ ಪ್ರಕಾರ ಮತಯಂತ್ರಗಳು ಸರಿ ಇರಲ್ಲ: ಪ್ರಹ್ಲಾದ್ ಜೋಶಿ
ಕಾಂಗ್ರೆಸ್ ಮತ್ತು ಎಎಪಿ ನಡುವಿನ ಜಗಳ !
ಕಾಂಗ್ರೆಸ್ ಮತ್ತು ಆಮ್ಆದ್ಮಿ ಎರಡು ಕೂಡ ಇಂಡಿಯಾ ಒಕ್ಕೂಟದ ಮೈತ್ರಿಪಕ್ಷಗಳಾಗಿದ್ದರು, ದೆಹಲಿ ವಿಧಾನಸಭೆಗೆ ಪರಸ್ಪರ ವಿರೋಧ ಭಾಸದೊಂದಿಗೆ ಕಣಕ್ಕಿಳಿದವು. ಒಂದೆಡೆ ರಾಹುಲ್ ಕೇಜ್ರಿವಾಲರನ್ನು ತೆಗಳುತ್ತಿದ್ದರೆ ಮತ್ತೊಂದೆಡೆ ಕೇಜ್ರಿವಾಲ್ ರಾಹುಲ್ರನ್ನು ಟೀಕಿಸುತ್ತಿದ್ದರು. ಇದರಿಂದ ವೋಟ್ ಡಿವೈಡ್ ಆಗಿ ಬಿಜೆಪಿಗೆ ಗೆಲುವು ತಂದು ಕೊಟ್ಟಿದೆ.