ಬಳ್ಳಾರಿ : ಮಟನ್ ಕೊಂಡುಕೊಂಡ ಹಣ ನೀಡಿಲ್ಲ ಎಂದು ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು. ಜಾಕೀರ್ ಎಂಬಾತನ ಮೇಲೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿಯ ಕೌಲ್ಬಜಾರ್ನ ಬಂಡಿಹಟ್ಟಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಜಾಕೀರ್ ಇಂದು ಬೆಳಿಗ್ಗೆ ಒಂದು ಕೆ.ಜಿ ಮಟನ್ ಖರೀದಿಸಿ ಬಳಿಕ 650 ರೂಪಾಯಿ ಹಣವನ್ನು ಪೋನ್ ಪೇ ಮಾಡಿದ್ದನು. ಆದರೆ ಟ್ರಾಂಜಾಕ್ಷನ್ ಫೇಲ್ ಆದ ಹಿನ್ನಲೆ. ಆ ಮೇಲೆ ಹಣ ಹಾಕುವುದಾಗಿ ಹೇಳಿ ಹೋಗಿದ್ದನು.
ಇದನ್ನೂ ಓದಿ :ಕೇಜ್ರಿವಾಲ್ಗೆ ಭಾರಿ ಮುಖಭಂಗ: ನವದೆಹಲಿಯಲ್ಲಿ ಹೀನಾಯ ಸೋಲು
ಆದರೆ ಮಟನ್ ಅಂಗಡಿಯವರು ಹಣ ನೀಡದೇ ಹೋಗಿದ್ದಾನೆ ಅಂತ ಆರೋಪಿಸಿ ಹಲ್ಲೆ ನಡೆಸಿದ್ದು. ಜಾಕೀರ್ ಕೆಲಸ ಮಾಡುತ್ತಿದ್ದ ಮೆಡಿಕಲ್ ಶಾಪ್ಗೆ ಜಾಕೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಜಿಲಾನ್, ಮೆಹಬೂಬ್ ಎಂಬುವವರು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದು. ಹಲ್ಲೆಗೊಳಗಾದ ಜಾಕೀರ್ಗೆ ತಲೆಗೆ ತೀವ್ರಗಾಯವಾಗಿದ್ದು. ರಕ್ತಸ್ರಾವವಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಜಾಕೀರ್ನನ್ನು ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದ.