ದೆಹಲಿ : ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಭಾರಿ ಮುಖಭಂಗ ಎದುರಾಗಿದ್ದು. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ದ ಸುಮಾರು 3000 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯನೀತಿ ಹಗರಣದಲ್ಲಿ ಜೈಲು ಸೇರಿ ಹೊರಬಂದಿದ್ದ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟು. ಜನತಾ ನ್ಯಾಯಾಲಯದ ತೀರ್ಪು ಬಂದ ಬಳಿಕ ಮತ್ತೆ ಸಿಎಂ ಆಗುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಜನತಾ ನ್ಯಾಯಾಲಯ ಕೇಜ್ರಿವಾಲ್ ಕೈ ಬಿಟ್ಟಿದ್ದು. ಕಳೆದೊಂದು ದಶಕದಿಂದ ದೆಹಲಿಯ ಗದ್ದುಗೆ ಮೇಲೆ ಕುಳಿತು ಆಳ್ವಿಕೆ ಮಾಡಿದ್ದ ಕೇಜ್ರಿವಾಲ್ಗೆ ಜನರು ಸೋಲಿನ ರುಚಿ ತೊರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ಶರ್ಮಾ ವಿರುದ್ದ ಕೇಜ್ರಿವಾಲ್ ಸೋಲನುಭವಿಸಿದ್ದು. ಪರ್ವೇಶ್ ದೆಹಲಿಯ ಸಿಎಂ ಅಭ್ಯರ್ಥಿ ಎಂಬ ಕೂಗುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ: 15ಕ್ಕೂ ಹೆಚ್ಚು ಜನರಿಗೆ ಗಾಯ
ಅಬಕಾರಿ ಹಗರಣದ ಪ್ರಮುಖ ಆರೋಪಿಗಳಾದ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಇಬ್ಬರು ಸೋಲನುಭವಿಸಿದ್ದಾರೆ. ಜೊತೆಗೆ ಹವಲಾ ಹಗರಣದಲ್ಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡ ಸೋಲನುಭವಿಸಿದ್ದಾರೆ.