ಬೆಂಗಳೂರು : ರಾಷ್ಟ್ರ ರಾಜಧಾನಿ ದೆಹಲಿಯ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು. ಬಿಜೆಪಿ ಕಛೇರಿಗಳ ಮುಂದೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದು. ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಕುಂಭಮೇಳದ ಬಳಿಕ ನಮಗೆ ಗೆಲುವು ದೊರೆತಿದೆ, ಇದು ಮೋದಿ ವರ್ಚಸ್ಸನ್ನು ಹೆಚ್ಚಿಸಿದೆ ಎಂದು ಹೇಳಿದರು.
ದೆಹಲಿ ಗೆಲುವಿನ ಬಗ್ಗೆ ಮಾತನಾಡಿದ ಆರ್.ಅಶೋಕ್ ‘ 27 ವರ್ಷದ ಬಳಿಕ ರಾಷ್ಟ್ರದ ರಾಜಧಾನಿಯಲ್ಲಿ ಬಿಜೆಪಿ ಗೆದ್ದಿದೆ, ಕುಂಭಮೇಳ ಆದ ಬಳಿಕ ಈ ಗೆಲುವು ಸಿಕ್ಕಿದೆ, ಇದರಿಂದ ನರೇಂದ್ರ ಮೋದಿಯವರ ವರ್ಚಸ್ಸು ಇನ್ನು ಹೆಚ್ಚಾಗಲಿದೆ. ಬಜೆಟ್ನಲ್ಲಿ ನೀಡಿದ 12 ಲಕ್ಷ ಆದಾಯ ತೆರಿಗೆ ವಿನಾಯತಿ ಕೂಡ ನಮಗೆ ಲಾಭ ಆಗಿದೆ.
ಇದನ್ನೂ ಓದಿ :ಮಟನ್ಗಾಗಿ ಜಗಳ, ಮೆಡಿಕಲ್ ಶಾಪ್ಗೆ ನುಗ್ಗಿ ಮನಸೋ ಇಚ್ಚೆ ಹಲ್ಲೆ
ಕೇಜ್ರಿವಾಲ್ ಮೊದಲು ಸಾಮಾನ್ಯರಂತೆ ರಾಜಕೀಯಕ್ಕೆ ಬಂದರು. ಆದರೆ ಆಮೇಲೆ ಶೀಷ್ ಮಹಲ್ ಕಟ್ಟಿದರು. ಆ ಮನೆಯಲ್ಲಿ 40ರೂಂಗಳು, 40 ಲಕ್ಷದ ಟಿವಿಯನ್ನು ಇಟ್ಟಿಕೊಂಡಿದ್ದಾರೆ. ಇದನ್ನೂ ದೆಹಲಿ ಜನರು ನೋಡಿದ್ದಾರೆ. ಇಂಡಿ ಮೈತ್ರಿ ಕೂಟವೇ ಕೇಜ್ರಿವಾಲ್ರನ್ನು ಒಬ್ಬ ಭ್ರಷ್ಟ ಎಂದು ಹೇಳಿದ್ದರು. ಅವರ ಮೈತ್ರಿ ನಾಯಕರ ಅವರನ್ನು ಟೀಕೆ ಮಾಡುತ್ತಾರೆ.
ಈ ಚುನಾವಣೆಯ ಮೂಲಕ ದೇಶಕ್ಕೆ ಮೋದಿ ಅನಿವಾರ್ಯ ಎಂಬ ಸಂದೇಶ ಬಂದಿದೆ. ಕರ್ನಾಟಕದ, ತೆಲಂಗಾಣ ಚುನಾವಣಾಗೆ ಇದು ದಾರಿ ದೀಪ. ಸಂಸತ್ ಚುನಾವಣೆ ಬಳಿಕ ಮಹಾರಾಷ್ಟ್ರ ,ಇದಿಗ ದೆಹಲಿಯಲ್ಲಿ ಗೆದ್ದಿದ್ದೇವೆ
ಇಡೀ ದೇಶಕ್ಕೆ ಒಂದು ಸಂದೇಶ ದೆಹಲಿ ಜನರು ಕೊಟ್ಟಿದ್ದರು ಎಂದು ಸಂತಸ ವ್ಯಕ್ತಪಡಿಸಿದರು.