Saturday, February 8, 2025

ವಿಡಿಯೋ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ದರ್ಶನ್​

ಬೆಂಗಳೂರು : ನಟ ದರ್ಶನ್​ ಸುರ್ಧಿಘ ಸಮಯದ ನಂತರ ಜನರಿಗೆ ವಿಡಿಯೋ ಸಂದೇಶವನ್ನು ನೀಡಿದ್ದು. ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಿಮ್ಮನ್ನು ಮೀಟ್​ ಮಾಡಿ ನಿಮಗೆ ಥ್ಯಾಂಕ್ಸ್​ ಹೇಳಬೇಕೆಂಬ ಆಸೆಯಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದ ಈ ಭಾರಿ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಬೆನ್ನು ನೋವಿನ ಸಮಸ್ಯೆಯಿಂದಾಗಿ ನಟ ದರ್ಶನ್​ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿ ವಿವರಿಸಿರುವ ನಟ ದರ್ಶನ್​ ‘ಬೆನ್ನು ನೋವಿಗೆ ಇಂಜೆಕ್ಷನ್​ ಪಡೆದಾಗ 15-20 ದಿನ ಚನ್ನಾಗಿರುತ್ತೇನೆ, ಆದರೆ ನಂತರ ಮತ್ತೆ ನೋವು ಆರಂಭವಾಗುತ್ತೆ ಮತ್ತೆ ಅದಕ್ಕೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇದಕ್ಕೆ ಆಪರೇಷನ್​ ಎನ್ನುವುದು ಕಟ್ಟಿಟ್ಟಬುತ್ತಿ. ಅದನ್ನು ಮಾಡಿಸಲೆಬೇಕು. ಆದರೆ ನಾನೇ ಅದನ್ನು ಸ್ವಲ್ಪ ಸಮಯದವರೆಗೂ ದೂರ ತಳ್ಳುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:‘ಪ್ರೀತ್ಸೊದ್ ತಪ್ಪಾ’ ಎಂದ ಮಗಳನ್ನೆ ಕೊಂದ ಅಪ್ಪಾ !

ಮುಂದುವರಿದು ಮಾತನಾಡಿದ ದರ್ಶನ್​ ‘ ಅನೇಕ ನಿರ್ಮಾಪಕರು ತುಂಭಾ ದಿನಗಳಿಂದ ಕಾಯುತ್ತಿದ್ದಾರೆ. ಅವರಿಗೆ ಅನ್ಯಾಯ ಮಾಡುವುದು ಬೇಡ ಎಂದ ದರ್ಶನ್​ ಶೀಘ್ರದಲ್ಲೆ ಸಿನಿಮಾ ಸೆಟ್​ನಲ್ಲಿ ಕಾಣಿಸಿಕೊಳ್ಳುವ ಹಿಂಟ್​ ನೀಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹೊರ ಬರುತ್ತಿದ್ದಂತೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವುದಾಗಿ ದರ್ಶನ್​ ಹೇಳಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿರುವ ದರ್ಶನ್​ ಇದೊಂದು ಬಾರಿ ನನ್ನನ್ನು ಕ್ಷಮಿಸಿ, ಆದಷ್ಟು ಬೇಗ ನಿಮ್ಮನ್ನು ನಾನು ಬೇಟಿಯಾಗುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES