Friday, February 7, 2025

ಆರಿಹೋಯ್ತು 45 ವರ್ಷಗಳಿಂದ ಉರಿಯುತ್ತಿದ್ದ ದೀಪ: ಗ್ರಾಮಸ್ಥರಿಗೆ ಕಂಟಕದ ಆತಂಕ !

ಕಾರವಾರ : ಅದು ಸರಿಸುಮಾರು 45 ವರ್ಷದಿಂದ ಎಣ್ಣೆ ಬತ್ತಿ ಇಲ್ಲದೆ ಉರಿಯುತ್ತಿದ್ದ ಮೂರು ದೀಪ. ಒಂದು ಮಹಿಳೆ ಹಚ್ಚಿದ ದೀಪದಿಂದ ಆ ಊರು ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿಯಾಗಿತ್ತು. ಆದರೆ ಇದೀಗ ಆ ದೀಪ ಆರಿ ಹೋಗಿದೆ. ಈ ಕುರಿತಾದ ವರದಿ ಇಲ್ಲಿದೆ.

ಹೌದು.. ಇದು ಜಗದ್ವಿಖ್ಯಾತ ವಾದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ದೀಪನಾಥೇಶ್ವರ ದೇಗುಲದ ದೀಪಗಳ ಕತೆ. ಇವತ್ತು ಈ ದೀಪಗಳು ಹಟಾತ್ತನೇ ಆರಿ ಹೋಗಿವೆ, ಈ ಮೂರು ದೀಪಗಳನ್ನು ದಿವಂಗತ ಶಾರದಮ್ಮನವರು 1979 ರಲ್ಲಿ ಬೆಳಗಿಸಿದ್ದರಂತೆ, ಅಂದಿನಿಂದ ಇಂದಿನವರೆಗೆ ಎಣ್ಣೆ ಬತ್ತಿ ಇಲ್ಲದೆ ಹಾಗೆ ಉರಿಯುತ್ತಿತ್ತು, ಅದೆಷ್ಟೊ ಭಕ್ತ ಸಾಗರವೇ ಇಲ್ಲಿ ಹರಿದು ಬಂದಿದೆ. ಸರಿ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ಬತ್ತಿ ಹಾಗೂ ಎಣ್ಣೆ ಇಲ್ಲದೇ ಈ ದೀಪಗಳು ಉರಿಯುತ್ತಿದ್ದವು ಎನ್ನೋದಕ್ಕೆ ಇಲ್ಲಿನ ಊರಿನ‌ ಜನರೇ ಸಾಕ್ಷಿ.

ಇದನ್ನೂ ಓದಿ :1850ರಲ್ಲಿ ಕಟ್ಟಿದ್ದ ಬಂಗಲೆಯಲ್ಲಿ ಬ್ರಿಟಿಷ್​ ಯುವತಿಯ ಆತ್ಮ: ಕೇರಳದ ಭಯಾನಕ ಸತ್ಯಕಥೆ

ಈ ಕ್ಷೇತ್ರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು. ಪೇಜಾವರ ಶ್ರೀ ಗಳು, ಹೀಗೆ ಅದೆಷ್ಟೊ ಮಠಾದಿಶರು ಇಲ್ಲಿ ಆಗಮಿಸಿ ದೀಪದ ಮಹತ್ವದ ಬಗ್ಗೆ ಮತ್ತು ಇಲ್ಲಿನ ಕೆಲವೊಂದು ವಿಷಯವನ್ನ ತಿಳಿದುಕೊಂಡು ಹೋಗಿದ್ದಾರೆ. ದೀಪಗಳ ಉಸ್ತುವಾರಿ ತೆಗೆದುಕೊಂಡಿದ್ದ ಕುಟುಂಬಸ್ಥ ಹಾಗೂ ಅರ್ಚಕ ವೆಂಕಟೇಶ್ ಎಂಬುವವರು ಇತ್ತೀಚಿಗೆ 14 ದಿನದ ಹಿಂದೆ ನಿಧನರಾಗಿದ್ದು. ಬುಧವಾರ ಸೂತಕ ಕಳೆದ ನಂತರ ಕಸ ಗುಡಿಸಲು ದೇಗುಲದ ಬಾಗಿಲು ತೆರೆದಾಗ ಮೂರು ದೀಪಗಳು ಆರಿ ಹೋಗಿದನ್ನ ಗಮನಿಸಿದ್ದಾರೆ, ಕೂಡಲೆ ಈ ವಿಚಾರ ಗಲ್ಲಿ ಗಲ್ಲಿಗಳಲ್ಲಿ ಸುದ್ದಿ ಹಬ್ಬಿದೆ ಜನ ಆತಂಕಿತರಾಗಿದ್ದಾರೆ, ಈಗ ದಿಕ್ಕೆ ತೋಚದ ಜನರು, ಮುಖಂಡರು, ಗ್ರಾಮಸ್ಥರ ಸೂಚನೆಯಂತೆ ದೇವಾಲಯ ಬಂದ್ ಮಾಡಲಾಗಿದೆ. ಇನ್ನೂ ನಾಲ್ಕೈದು ದಿನ ಬಿಟ್ಟು ಗುರು-ಹಿರಿಯರ ಸಲ‌ಹೆ ಪಡೆದು ದೇಗುಲದ ಕದ ತೆರೆಯಲು ಅರ್ಚಕ ಕುಟುಂಬ ಯೋಚಿಸಿದೆ.

ಏನಿದು ಚಮತ್ಕಾರ !

1979 ರ ಸಮಯದಲ್ಲಿ ಮುಂಡಗೋಡದ ಕಲ್ಮೇಶ್ವರ ಮಠದ ಪ್ರವಚನದಲ್ಲಿ ನಿರತರಾಗಿದ್ದ ಶಾರದಾ ಬಾಯಿ ದೈವಜ್ಞ ಅವರು ಹಚ್ಚಿಟ್ಟ ದೀಪ ಬತ್ತಿ ಹಾಗೂ ಎಣ್ಣೆ ಇಲ್ಲದೆಯೇ ಸುಮಾರು ದಿನ ಉರಿಯಿತು ಅದಾದ ಮೇಲೆ ಪರೀಕ್ಷಾರ್ಥವಾಗಿ ಇನ್ನೆರೆಡು ದೀಪ ಹಚ್ಚಲು ಅದೇ ರೀತಿ ಪವಾಡ ನಡೆಯಿತು. ಆವಾಗಿನಿಂದ ಈವರೆಗೆ ಕಲ್ಮೇಶ್ವರ ಮಠದ ಗುರುಗಳ ಆದೇಶದಂತೆ ದತ್ತಾತ್ರೇಯ ಸ್ವರೂಪವೆಂದು ದೀಪವನ್ನು ಆರಾಧಿಸುತ್ತಾ ಬರಲಾಗುತ್ತಿದೆ. ಆದ್ರೆ ಈಗ ದೀಪಗಳು ಆರಿ ಹೋಗಿದ್ದು ಊರಿನ ಜನರಲ್ಲಿ ಆತಂಕ ಮರುಗಟ್ಟಿದೆ. ಮುಂದೆ ಎಲ್ಲಾದರು ಊರಿಗೆ ಕಂಠಕ‌ ಎದುರಾಗತ್ತ ಎನ್ನುವ ಬಗ್ಗೆ ಜನ ಮನೆ ಮನೆಯಲ್ಲಿ ಚರ್ಚೆ ಮಾಡಿಕೊಳ್ಳುವಂತಾಗಿದೆ.

ಒಟ್ಟಾರೆ ಸರಿ ಸುಮಾರು 45ವರ್ಷ ಉರಿದ ದೀಪ ಈಗ ಆರಿ ಹೋಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದೆ ಈ ಬಗ್ಗೆ ಚರ್ಚಿಸಿ ದೇವಾಲಯದಲ್ಲಿ ಮುಂದಿನ ಕಾರ್ಯ ಮಾಡಲಾಗುವದಂತೆ..

RELATED ARTICLES

Related Articles

TRENDING ARTICLES