ಮಧ್ಯಪ್ರದೇಶದ ಮ್ಹೋ ಜಿಲ್ಲೆಯಲ್ಲಿ ಗುರುವಾರ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿಆರು ಜನರು ಸಾವನ್ನಪ್ಪಿದ್ದಾರೆ. ಮನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಅಪಘಾತವಾಗಿದ್ದು,ಈ ಅಪಘಾತದಲ್ಲಿ 15ಕ್ಕು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ 2:30ರ ವೇಳೆಗೆ ಮಾನ್ಪುರ ಭೈರವ ಘಾಟ್‌ನಲ್ಲಿ ಅಪಘಾತ ಸಂಭವಿಸಿದ್ದು. ಅಪಘಾತಕ್ಕೀಡಾದ ಟೆಂಪೋ ಟ್ರಾವೆಲರ್‌ನಲ್ಲಿ ಕರ್ನಾಟಕದ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಮೊದಲಿಗೆ ಟ್ಯಾಂಕರ್ಗೆ ಟೆಂಪೋ ಟ್ರಾವಲರ್ ಡಿಕ್ಕಿಯಾಗಿದ್ದು. ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಬೈಕ್ಗಳು ಅಪಘಾತಕ್ಕೆ ಈಡಾಗಿವೆ. ಅಪಘಾತದಲ್ಲಿ 5 ಜನರು ಸ್ಥಳದಲ್ಲೆ ಸಾವನ್ನಪ್ಪಿದ್ದು. 15ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಭೀಕರ ರಸ್ತೆ ಅಪಘಾತ: ಮಹಿಳೆ ಸಾ*ವು, ಮೂವರಿಗೆ ಗಂಭೀರ ಗಾಯ
ಘಟನಾ ಸ್ಥಳಕ್ಕೆ ಮನ್ಪುರ ಪೊಲೀಸ್ ಠಾಣಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಗಾಯಾಳುಗಳನ್ನು ಜಿಲ್ಲಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭೀಕರತೆಗೆ ವಾಹನದ ಮುಂಭಾಗ ನುಚ್ಚುನೂರಾಗಿದೆ. ಸಾವನ್ನಪ್ಪಿರುವ ಬೈಕ್ ಸವಾರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.