ಚಿತ್ರದುರ್ಗ : ಕೊರೊನಾ ಎಫೆಕ್ಟ್ ನಿಂದಾಗಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬದನೆ ಬೆಳೆಯನ್ನು ರೈತ ನಾಶಪಡಿಸಿದ್ದಾನೆ. ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿ ಗ್ರಾಮದ ರೈತ ಜಗದೀಶ್ ಎಂಬಾತ ಕರಿಸಿದ್ದಪ್ಪ ಎಂಬ ರೈತನ ಎರಡೂವರೆ ಎಕರೆ ಜಮೀನು ಗುತ್ತಿಗೆ ಪಡೆದು, ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಭೂಮಿಯನ್ನು ಹದ ಮಾಡಿ ಬದನೆ ಬಿತ್ತನೆ ಮಾಡಿದ್ದರು, ರೈತನ ನಿರೀಕ್ಷೆಯಂತೆ ಉತ್ತಮ ಇಳುವರಿ ಕೂಡ ಬಂದಿತ್ತು, ಆದರೆ ಬದನೆಯಕಾಯಿ ಬೆಲೆ ತೀವ್ರ ಕುಸಿತ ಕಂಡಿದ್ದರಿಂದ ಬೇಸತ್ತ ರೈತ ಬೆಳೆಯನ್ನೇ ನಾಶ ಪಡಿಸಿದ್ದು, ಸಾಲದ ಸುಳಿಗೆ ಸಿಲುಕಿರುವ ನಮಗೆ ದಯವಿಟ್ಟು ಪರಿಹಾರ ನೀಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ..