ಮಂಡ್ಯ : ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟದ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ‘ಪಕ್ಷದಲ್ಲಿ ನಡೆಯುತ್ತಿರುವ ಘಟನೆ ಬೇಸರ ತಂದಿದೆ. ಈ ರೀತಿ ಗುಂಪುಗಾರಿಕೆ ಮಾಡೋದು ಒಳ್ಳೇದಲ್ಲ. ಎದು ಎರಡು ಬಣಗಳಿಗೂ ಒಳ್ಳೇದಲ್ಲ ಎಂದು ಹೇಳಿದರು.
ಮದ್ದೂರಿನಲ್ಲಿ ಮಾತನಾಡಿದ ಶಾಸಕ ಆರ್.ಅಶೋಕ್ ‘ನಾನು ಈ ಪಾರ್ಟಿಗೆ ಬಂದು 50 ವರ್ಷ ಆಗಿದೆ.
ನನಗೆ 18 ವರ್ಷ ವಯಸ್ಸಿನಲ್ಲೆ ಬಿಜೆಪಿಗೆ ಬಂದವನು. ಎಮರ್ಜೆನ್ಸಿಯಲ್ಲಿ ಜೈಲಿನಲ್ಲಿದ್ದೆ, ನಾನು ಚಿಕ್ಕಪ್ಪ, ತಮ್ಮ ಎಲ್ಲರೂ ಜೈಲಿನಲ್ಲಿದ್ದೊ. ಆಗಿನಿಂದಲೂ ನಾವು ಹೋರಾಟ ಮಾಡಿಕೊಂಡು ಬಂದವರು. ಒಂದೇ ಬಾರಿಗೆ ಲೀಡರ್ ಆಗಿಲ್ಲ, ಹಂತ ಹಂತವಾಗಿ ಬಂದವನು.
ಏನು ಇಲ್ಲದ ಬೆಂಗಳೂರಿನಲ್ಲಿ ನಾನು, ಅನಂತ್ ಕುಮಾರ್ ಸೇರಿಕೊಂಡು ಪಾರ್ಟಿ ಕಟ್ಟಿದ್ದೇವೆ. ಹಳೆ ಮೈಸೂರಿನಲ್ಲೂ ಹೋರಾಟ ಮಾಡಿದ್ದೇವೆ. ಆದರೆ ಇವಾಗ ನಡೆಯುತ್ತಿರುವ ಘಟನೆ ಬೇಸರ ತಂದಿದೆ. ಈ ಗುಂಪುಗಾರಿಕೆ ಎರಡು ಬಣಗಳಿಗೂ ಒಳ್ಳೆಯದಲ್ಲ. ಇವೆಲ್ಲವೂ ಸರಿಯಾಗಬೇಕು. ಇದರಿಂದ ಪಾರ್ಟಿಗಾಗಲಿ, ಜನರಿಗಾಗಲೀ ಒಳ್ಳೆಯದಲ್ಲ. ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡೋದು ನಮ್ಮ ಕರ್ತವ್ಯ. ಸರ್ಕಾರದ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದ್ರೆ ಪಾರ್ಟಿ ಒಗ್ಗಟ್ಟಾಗಿರಬೇಕು.ಈ ಕುರಿತು ಕೇಂದ್ರದ ನಾಯಕರ ಜೊತೆ ಟಚ್ನಲ್ಲಿದ್ದೇವೆ. ಪಕ್ಷದಲ್ಲಿ ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಎಲ್ಲ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ :ಪ್ರೇತ ಕಾಟಕ್ಕೆ ಕುಟುಂಬಸ್ಥರು ಕಂಗಾಲು: ಮೊಬೈಲ್ ಕ್ಯಾಮರದಲ್ಲಿ ಸೆರೆಯಾಯ್ತು ಭೂತ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಆರ್.ಅಶೋಕ್ ‘ಮೂರು ವರ್ಷಕ್ಕೆ ಒಂದು ಬಾರಿ ಚುನಾವಣೆ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರೆ ಬದಲಾಗುತ್ತಾರೆ. ರಾಜ್ಯಾಧ್ಯಕ್ಷದ ಬದಲಾವಣೆ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು. ಅಧ್ಯಕ್ಷರಾಗಬೇಕು ಅನ್ನೋದು ಎಲ್ಲರಿಗೂ ಆಸೆ ಇರುತ್ತೆ. ಅದನ್ನೆಲ್ಲ ಅಮಿತ್ ಶಾ ಅವರ ತೀರ್ಮಾನ ಮಾಡ್ತಾರೆ. ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡ್ತಿದ್ದೇನೆ. ಯತ್ನಾಳ ಕೂಡ ಬಿಜೆಪಿ ನಾಯಕರೇ, ವಿಜಯೇಂದ್ರ ಅವರು ಬಿಜೆಪಿ ನಾಯಕರೇ. ತೀರ್ಮಾನ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು.
ಯತ್ನಾಳ್ ಬಣವನ್ನು ವಜಾಗೊಳಿಸಬೇಕು ಎಂದು ಬಿಎಸ್ವೈ ಬಣದ ಒತ್ತಾಯದ ಕುರಿತು ಮಾತನಾಡಿದ ಅಶೋಕ್ ಯಾರೋ ಹೇಳಿದ್ರೂ ಎಂದು ವಜಾ ಮಾಡಕ್ಕಾಗಲ್ಲ. ಇದರ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತೆ. ಇದಕ್ಕೆಲ್ಲಾ ಅಂತ್ಯ ಹಾಡಬೇಕು ಎಂದು ಹೇಳಿದರು.