ಹೊಸಕೋಟೆ : ಆಂಧ್ರಪ್ರದೇಶದ ರಕ್ತಚಂದನಕ್ಕೂ ನಮ್ಮ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿಗೂ ಅವಿನಾಭಾವ ಸಂಬಂಧ. ಆಂಧ್ರಪ್ರದೇಶದ ಅಕ್ರಮವಾಗಿ ಸಾಗಣೆ ಆಗುವ ರಕ್ತಚಂದನ ಪದೇ ಪದೇ ಹೊಸಕೋಟೆಯಲ್ಲಿ ಪೋಲಿಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯೂ ಹೊಸಕೋಟೆಯಲ್ಲಿ ಕೋಟಿ ಮೌಲ್ಯದ ರಕ್ತಚಂದನ ಪತ್ತೆಯಾಗಿದೆ.
ಹೌದು.. ರಾಜ್ಯದ ಬೆಂಗಳೂರುನ ಹೊಸಕೋಟೆ ತಾಲ್ಲೂಕಿನ ತಿರುಮಲಶೆಟ್ಟಿಹಳ್ಳಿ ಪೋಲಿಸರು ಮತ್ತು ಆಂಧ್ರ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಕೋಟಿ ಮೌಲ್ಯದ 180 ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ರಕ್ತಚಂದನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ನೀಡಿರುವ ಮಾಹಿತಿ ಆಧಾರಿಸಿ ಹೊಸಕೋಟೆ ತಾಲ್ಲೂಕಿನ ತಿರುಮಲಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ಶೋಧನೆ ನಡೆಸಿದ್ದಾರೆ.
ಇದನ್ನೂ ಓದಿ :ಹೊಟ್ಟೆಗೆ ಹಿಟ್ಟಿಲ್ಲದೆ, ಸ್ಮಶಾಣದ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ಬಂದ ಬಿಜೆಪಿ ನಾಯಕ
ಆರೋಪಿಗಳು ನೀಡಿದ ಖಚಿತ ಮಾಹಿತಿ ಮೇರೆಗೆ ತಿರುಮಲಶೆಟ್ಟಿಹಳ್ಳಿ ಪೋಲಿಸರು ಮತ್ತು ಆಂಧ್ರ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಅಡಗಿಸಿಟ್ಟಿದ್ದ ಕೋಟಿ ಮೌಲ್ಯದ 180 ರಕ್ತಚಂದನ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರ ಪೋಲಿಸರ ಪ್ರಕರಣ ಯಶಸ್ಸಿಗೆ ಹೊಸಕೋಟೆ ಪೋಲಿಸರು ಸಾಥ್ ನೀಡಿದ್ದಾರೆ. ಇನ್ನೂ ಪತ್ತೆಯಾದ ರಕ್ತಚಂದನದ ತುಂಡುಗಳನ್ನು ಆಂಧ್ರ ಪೋಲಿಸರು ತಮ್ಮ ರಾಜ್ಯಕ್ಕೆ ಸಾಗಿಸಿದ್ದಾರೆ.
ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕೆಲವೊಂದು ಗ್ರಾಮಗಳು ಈ ಅಕ್ರಮ ರಕ್ತಚಂದನಕ್ಕೆ ಹೆಸರುವಾಸಿ ಆಗಿದೆ. ಅದರಲ್ಲಿ ಕಟ್ಟಿಗೇನಹಳ್ಳಿ ಮತ್ತಷ್ಟು ಹೆಸರುವಾಸಿ ಈ ಬಾರಿಯ ಕೋಟಿ ಮೌಲ್ಯದ ರಕ್ತಚಂದನ ಕಟ್ಟಿಗೇನಹಳ್ಳಿಯಲ್ಲಿ ಅಡಗಿಸಲು ಸಹಕಾರ ನೀಡಿದವರು ಯಾರು ಎಂದು ಪೋಲಿಸರು ತಿಳಿಸಬೇಕಾಗಿದೆ.