ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಇಂದ್ರಜಿತ್ ಸಿನ್ಹಾ ಭಿಕ್ಷೆ ಬೇಡುತ್ತಿರುವ ಪೋಟೊ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಅಗಿದೆ. ಪಶ್ಚಿಮ ಬಂಗಾಳದ ವೀರಭೂಮಿ ಜಲ್ಲೆಯ ತಾರಾಪೀಠ ಸ್ಮಶಾನ ಘಾಟ್ ಬಳಿ ಇಂದ್ರಜಿತ್ ಸಿನ್ಹಾ ಅವರು ಭಿಕ್ಷುಕರೊಂದಿಗೆ ಕುಳಿತು ಭಿಕ್ಷೆ ಬೇಡುತ್ತಿರೋದು ಕಂಡು ಬಂದಿದೆ. ಇವರನ್ನು ಬಂಗಾಳ ರಾಜಕಾರಣದಲ್ಲಿ ಬುಲೆಟ್ ಬಾಬ ಎಂದೇ ಖ್ಯಾತರಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಾ ಭಿಕ್ಷೆ ಬೇಡುತ್ತಿದ್ದ ಇಂದ್ರಜಿತ್ ಸಿನ್ಹಾ ಅವರ ಫೋಟೋಗಳು ಹೊರ ಬರುತ್ತಿದ್ದಂತೆ ಅಲರ್ಟ್ ಆದ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷ, ಕೇಂದ್ರ ಶಿಕ್ಷಣ ಸಚಿವ ಡಾ.ಸುಕಾಂತ್ ಮಜೂಮದಾರ್, ವೀರಭೂಮಿಯ ಬಿಜೆಪಿ ಜಿಲ್ಲಾಧ್ಯಕ್ಷ ಸಂಪರ್ಕಿಸಿದ್ದಾರೆ. ಕೂಡಲೇ ಅನಾರೋಗ್ಯದಿಂದ ಬಳಲುತ್ತಿರುವ ಇಂದ್ರಜಿತ್ ಸಿನ್ಹಾ ಅವರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಸೂಚನೆ ನೀಡಿದ್ದರು.
ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕು ಸುವೇಂದು ಅವರು ಕೂಡ ಇಂದ್ರಜಿತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು. ಸದ್ಯ ಇಂದ್ರಜಿತ್ ಸಿನ್ಹಾ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ :ರಾಜ್ಯ ಬಿಜೆಪಿಯಲ್ಲಿ ಒಳಜಗಳ, ಮೋದಿ ತೀರ್ಮಾನವೇ ಅಂತಿಮ: ಬಸವರಾಜ್ ಬೊಮ್ಮಾಯಿ
ಒಂದು ಕಾಲದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದ ಇಂದ್ರಜಿತ್ ಸಿನ್ಹಾ, ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆರಂಭದಲ್ಲಿ ಗಡ್ಡೆ ಎಂದು ತಿಳಿದಿತ್ತು. ನಂತರ ಅದು ಕ್ಯಾನ್ಸರ್ ಆಗಿ ಬದಲಾಗಿತ್ತು. 40 ವರ್ಷದ ಇಂದ್ರಜಿತ್ ಸಿನ್ಹಾ ಅವಿವಾಹಿತರಾಗಿದ್ದು, ಉಳಿದುಕೊಳ್ಳಲು ಸಹ ಯಾವುದೇ ಸೂಕ್ತ ವ್ಯವಸ್ಥೆಯೂ ಇರಲಿಲ್ಲ. ಈ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ವೀರಭೂಮಿ ಜಲ್ಲೆಯ ತಾರಾಪೀಠ ಸ್ಮಶಾನ ಘಾಟ್ ಬಳಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದರು. ಇಂದ್ರಜಿತ್ ಸಿನ್ಹಾ ತಂದೆ ಮತ್ತು ತಾಯಿ ಹಲವು ವರ್ಷಗಳ ಹಿಂದೆಯೇ ಮೃತರಾಗಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಇವರನ್ನು ರಾಜ್ಯ ಬಿಜೆಪಿ ಘಟಕದಲ್ಲಿ ಜವಬ್ದಾರಿಯುತ ಸ್ಥಾನವನ್ನು ನೀಡಿ ಗೌರವಿಸಿತ್ತು. ಅನಾರೋಗ್ಯದ ಕಾರಣದಿಂದ ಪಕ್ಷದ ಕೆಲಸಗಳನ್ನು ಮಾಡಲು ಇಂದ್ರಜಿತ್ ಸಿನ್ಹಾ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದರು. ಅನಾರೋಗ್ಯ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ಭಿಕ್ಷೆ ಬೇಡಲು ಆರಂಭಿಸಿದ್ದರು ಎಂದು ತಿಳಿದು ಬಂದಿದೆ.