ಕೊಡಗು : ಕ್ರೈಸ್ತ ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಕಾರಣಕ್ಕೆ ಅನಾರೋಗ್ಯದಿಂದ ಸಾವನ್ನಪ್ಪಿದರು ಮೃತನ ಅಂತ್ಯಸಂಸ್ಕಾರಕ್ಕೆ ಹೆಂಡತಿ ಮಕ್ಕಳು ಸಂಬಂಧಿಕರು ಯಾರು ಬಾರದ ಹಿನ್ನಲೆ, ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರೆ ಸೇರಿ ಶವಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಏನೆ ಹಾರಾಟ ಹೋರಾಟ ಮಾಡಿದ್ರು ಕೂಡ ಕೊನೆಯಲ್ಲಿ ಎಲ್ಲವೂ ಶೂನ್ಯ ಎಂಬುದು ಮತ್ತೆ ರುಜುವಾತಾಗಿದೆ. ಕ್ರೈಸ್ತ ಧರ್ಮದಲ್ಲಿ ಜನಿಸಿದ ಯೂಸುಫ್(ವರ್ಗಿಸ್) ಎಂಭಾತ ಇಸ್ಲಾಂ ಧರ್ಮದಿಂದ ಪ್ರೇರಣೆ ಗೊಂಡು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡಿದ್ದಾನೆ. ಇದೀಗ 68 ವರ್ಷದ ಯೂಸುಫ್(ವರ್ಗಿಸ್) ಅನಾರೋಗ್ಯದ ಹಿನ್ನಲೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ ತೀವ್ರ ಅನಾರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದ ವ್ಯಕ್ತಿ ಜು.4ರಂದು ಮೃತಪಡುತ್ತಾನೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರ ಸಂತೆ ಸಮೀಪದ ಗೋಪಾಲಪುರದಲ್ಲಿ ಒಬ್ಬನೆ ವಾಸವಿದ್ದ ಎಂದು ತಿಳಿದು ಬಂದಿದೆ. ಮಂಗಳೂರನಲ್ಲಿ ನೆಲೆಸಿರೋ ಆತನ ಹೆಂಡತಿ ಮಕ್ಕಳಿಗೆ ವಿಷಯ ತಿಳಿಸಿದ್ರು ಯಾರು ಬಾರದ ಹಿನ್ನಲೆ ಅನಾಥ ಶವವೆಂದು ಮಡಿಕೇರಿ ಶವಾಗಾರದಲ್ಲಿರಿಸಲಾಗಿತ್ತು. ಆದ್ರೆ ಇದನ್ನ ತಿಳಿದ ಕರವೆ ಕಾರ್ಯಕರ್ತರು ಹಾಗೂ ಸ್ಥಳೀಯರು ತಾವೇ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಆತ ಹುಟ್ಟಿದ್ದು ಕ್ರೈಸ್ತ ಧರ್ಮದಲ್ಲಾದ್ರು ಆತ ಮತಾಂತರಗೊಂಡು ಮುಸಲ್ಮಾನಾಗಿದ್ದ ಆದ್ರೆ ಆತನ ಅಂತ್ಯಕ್ರೀಯೆ ನಡೆದಿದ್ದು ಹಿಂದು ಧರ್ಮದಲ್ಲಿ. ಮನುಷ್ಯನ ಜೀವನ ಇಷ್ಟೇ ಎಂಬುದು ನಿಜಕ್ಕೂ ವಿಪರ್ಯಾಸವೆ ಸರಿ.