ಚಿಕ್ಕಬಳ್ಳಾಪುರ : ಕರ್ನಾಟಕದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮೈದಾನ ಎಂದರೆ ಮೊದಲಿಗೆ ನೆನಪಿಗೆ ಬರೋದು ಚಿನ್ನಸ್ವಾಮಿ ಕ್ರಿಕೆಟ್ ಮೈದಾನ, ಆದರೆ ಇದೀಗ ಮತ್ತೊಂದು ಅಂತರ್ ರಾಷ್ಟ್ರೀಯ ಮೈದಾನ ಚಿಕ್ಕಬಳ್ಳಾಪುರದಲ್ಲಿ ತಲೆ ಎತ್ತುತ್ತಿದೆ. ಈ ಮೈದಾನದಲ್ಲಿ ಇದೇ ಫೆಬ್ರವರಿ 08 ರಂದು ಭಾರತ ಮತ್ತು ಶ್ರೀಲಂಕಾ ತಂಡಗಳೂ ಸೆಣಸಾಡಲಿವೆ.
ಹೌದು.. ವಿಶ್ವ ಕ್ರಿಕೆಟ್ ದಿಗ್ಗಜರ ಸಮಾಗಮಕ್ಕೆ ಸರ್.ಎಂ.ವಿಶ್ವೇಶ್ವರಯ್ಯರ ತವರೂರು ಸಾಕ್ಷಿಯಾಗಲಿದೆ. ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿರುವ ಅಂತರ್ ರಾಷ್ಟ್ರೀಯ ಮೈದಾನದಲ್ಲಿ ಪಂದ್ಯಾವಳಿ ನೆರೆವೇರಲಿದ್ದು. ಒನ್ ವರ್ಲ್ಡ್ ತಂಡವಾಗಿ ಭಾರತ ಮತ್ತು ಒನ್ ಫ್ಯಾಮಿಲಿ ತಂಡವಾಗಿ ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ಈ ಕ್ರಿಕೆಟ್ ಪಂದ್ಯಾವಳಿ ಕುರಿತು ಸತ್ಯಸಾಯಿ ಮಾನವ ಅಭ್ಯುದಯ ವಿವಿಯ ಕುಲಾಧಿಪತಿ ನರಸಿಂಹಮೂರ್ತಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾ*ವು
ಕ್ರಿಕೆಟ್ಗೆ ಭಾರತ ತಂಡ !
ಒನ್ ವರ್ಲ್ಡ್ ತಂಡವಾಗಿ ಭಾರತದ ಇರ್ಫಾನ್ ಪಠಾನ್ ನಾಯಕತ್ವದಲ್ಲಿ ಯೂಸುಫ್ ಪಠಾನ್, ನಮಾನ್ ಓಝಾ, ಎಸ್.ಬದ್ರಿನಾಥ್, ಅಶೋಕ್ ದಿಂಡಾ, ಪಿಯೂಶ್ ಚಾವ್ಲಾ, ಅಭಿಮನ್ಯು ಮಿಥುನ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಷಿ, ಪಾರ್ಥಿವ್ ಪಟೇಲ್, ಸುಜಿತ್ ಸೋಮಸುಂದರ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ,ದೊಡ್ಡ ಗಣೇಶ್ ಆಟಗಾರರು.
ಶ್ರೀಲಂಕಾ ತಂಡ !
ಒನ್ ಫ್ಯಾಮಿಲಿ ತಂಡವಾಗಿ ಶ್ರೀಲಂಕಾದ ಅರವಿಂದ ಡಿ ಸಿಲ್ವಾ ಮಾರ್ವನ್ ಅಟಪಟ್ಟು, ಚಮಿಂಡಾ ವಾಸ್, ಉಪುಲ್ ತರಂಗ, ತರಂಗ ಪರಣವಿತಣ, ಮಿಲಿಂದ ಸಿರಿವರ್ಧನ, ಅಸೆಲಾ ಗುಣರತ್ನೆ, ನುವಾನ್ ಜೋಯ್ಸಾ, ಮುತ್ತಯ್ಯ ಮುರಳೀಧರನ್, ತಿಲಾನ್ ತುಷಾರ, ರವೀಂದ್ರ ಪುಷ್ಪಕುಮಾರ, ಅಜಂತಾ ಮೆಂಡಿಸ್ ಮತ್ತು ರೊಮೇಶ್ ಕಲುವಿತರಣ ಭಾಗಿ