Wednesday, February 5, 2025

ರಾಜ್ಯಧ್ಯಕ್ಷ ಸ್ಥಾನಕ್ಕೆ 8 ಜನರ ಪಟ್ಟಿ ಸಿದ್ದಪಡಿಸಿದ ಭಿನ್ನಮತಿಯರು

ದೆಹಲಿ : ಬಿಜೆಪಿಯ ಒಳಜಗಳ ಕ್ಲೈಮ್ಯಾಕ್ಸ್​​ ಹಂತಕ್ಕೆ ತಲುಪುವ ಹಂತಕ್ಕೆ ಬಂದಿದ್ದು. ಈಗಾಗಲೇ ದೆಹಲಿಗೆ ಹೈಕಮಾಂಡ್​ ಭೇಟಿಗೆ ಹೋಗಿರುವ ಯತ್ನಾಳ್​ ಮತ್ತು ಟೀಂ ರಾಜ್ಯಧ್ಯಕ್ಷ ಸ್ಥಾನಕ್ಕೆ 8 ಜನರ ಶಾರ್ಟ್​ ಲೀಸ್ಟ್​​ ರೆಡಿ ಮಾಡಿಕೊಂಡಿದ್ದು. ಹೈಕಮಾಂಡ್​ಗೆ ಸಲ್ಲಿಕೆ ಮಾಡಲು ಸಿದ್ದತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಹೌದು.. ಕಳೆದ ಕೆಲ ತಿಂಗಳಿಂದ ಬಿಜೆಪಿಯ ಒಳಜಗಳ ಬೀದಿಗೆ ಬಿದ್ದಿದ್ದು. ಯತ್ನಾಳ್​ ಮತ್ತು ವಿಜಯೇಂದ್ರ ಬಣದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಾ ಪಕ್ಷಕ್ಕೆ ಮುಜುಗರ ನೀಡುತ್ತಿದ್ದಾರೆ. ಇದರ ನಡುವೆ ತಟಸ್ಥ ಬಣ ಇವರ ಮಧ್ಯೆ ರಾಜಿ ಸಂಧಾನಕ್ಕೆ ಪ್ರಯತ್ನಿಸಿ ವಿಫಲವಾಗಿದೆ. ಇದರ ಬೆನ್ನಲ್ಲೆ ಯತ್ನಾಳ್​ ಮತ್ತು ತಂಡ ಬಿಜೆಪಿ ಹೈಕಮಾಂಡ್​ ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಿದ್ದು. ವಿಜಯೇಂದ್ರರನ್ನು ರಾಜ್ಯಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿ ತಮ್ಮ ಬಣದಿಂದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ :ಹಾಸ್ಟೆಲ್​ನಲ್ಲಿ ನೇಣು ಬಿಗಿದೊಕೊಂಡು ನರ್ಸಿಂಗ್​ ವಿದ್ಯಾರ್ಥಿನಿ ಸಾ*ವು

ರಾಜ್ಯಧ್ಯಕ್ಷ ಸ್ಥಾನಕ್ಕೆ ಭಿನ್ನಮತಿಯರು 8 ಜನರ ಶಾರ್ಟ್​ ಲೀಸ್ಟ್​ ರೆಡಿಕ ಮಾಡಿಕೊಂಡಿದ್ದು. ನಾಲ್ವರು ಲಿಂಗಾಯತರು, ಇಬ್ಬರು ಒಬಿಸಿ, ಇಬ್ಬರು ದಲಿತರ ಹೆಸರು ಕೊಡಲು ರೆಬಲ್ಸ್​ ನಾಯಕರು ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ 8 ಜನರ ಪೈಕಿ ಒಬ್ಬರನ್ನು ರಾಜ್ಯಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಲಿಂಗಾಯತ ಸಮುದಾಯದಿಂದ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಬಸವರಾಜ್ ಬೊಮ್ಮಾಯಿ.
ಶಾಸಕ ಅರವಿಂದ್ ಬೆಲ್ಲದ್, ಕೇಂದ್ರ ಸಚಿವ ವಿ.ಸೋಮಣ್ಣರನ್ನು ರಾಜ್ಯಧ್ಯಕ್ಷರಾಗಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು. ದಲಿತ ಸಮುದಾಯದಿಂದ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಮಾಜಿ ಸಂಸದ ಶ್ರೀರಾಮುಲು, ಹಾಗೂ ಒಬಿಸಿ ಸಮುದಾಯ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ವಿ.ಸುನೀಲ್ ಕುಮಾರ್ ಕೂಡ ಲೀಸ್ಟ್​ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES