ದೆಹಲಿ: ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಚುನಾವಣೆ ನಡೆಯುತ್ತಿದ್ದು. ಇದರ ಬೆನ್ನಲೆ ನರೇಂದ್ರ ಮೋದಿ ಇಂದು ಪ್ರಯಾಗ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ್ದು. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿಗೆ ಸಾಥ್ ನೀಡಿದರು.
ಬೆಳಗ್ಗೆ 10:05ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ನಂತರ ಅಲ್ಲಿಂದ ಬೆಳಗ್ಗೆ 10:10ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10:45 ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದರು. 10:50ಕ್ಕೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಿದರು. 11:15ರ ವೇಳೆಗೆ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ ಮೋದಿ ಪವಿತ್ರ ಸ್ನಾನ ಮಾಡಿದರು.
ಇದನ್ನೂ ಓದಿ :ರಾಜ್ಯಧ್ಯಕ್ಷ ಸ್ಥಾನಕ್ಕೆ 8 ಜನರ ಪಟ್ಟಿ ಸಿದ್ದಪಡಿಸಿದ ಭಿನ್ನಮತಿಯರು
ಕೈನಲ್ಲಿ ಜಪಮಾಲೆ ಹಿಡಿದು, ಕೊರಳಿಗ ರುದ್ರಾಕ್ಷಿ ಧರಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮೋದಿ, ತಾಯಿ ಗಂಗಾ ಮಾತೆಗೆ ನಮಿಸಿ ಅಮೃತ ಸ್ನಾನ ಮಾಡಿದರು.