ಮೈಸೂರು : ನಾಡಿನ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವ ಜವಾಬ್ದಾರಿ ಸರ್ಕಾರದ್ದು. ಕೊರೊನಾ ಹೊಡೆತದಿಂದ ಕಂಗೆಟ್ಟಿರುವ ಇಂತಹ ಸಂಧರ್ಭದಲ್ಲಿ ಆದಿವಾಸಿಗಳಿಗೆ ಮೂಲ ಸೌಕರ್ಯಗಳಿಲ್ಲದೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಸೌಕರ್ಯಗಳ ಕೊರತೆಯಿಂದ ನಾಡಿಗೆ ಗುಡ್ ಬೈ ಹೇಳಿ ಕಾಡಿಗೆ ತೆರಳಲು ಸಜ್ಜಾಗುತ್ತಿದ್ದಾರೆ. ಹೆಚ್.ಡಿ.ಕೋಟೆ ತಾಲೂಕು ಅಳಲಹಳ್ಳಿ ಗ್ರಾಮದ ಆದಿವಾಸಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.ಇಂದಿರಾ ಗಾಂಧಿ ರವರ ಆಡಳಿತ ಅವಧಿಯಲ್ಲಿ ಇಲ್ಲಿಗೆ ಬಂದು ನೆಲೆಸಿದ ಆದಿವಾಸಿಗಳಿಗೆ ನಾಲ್ಕಾರು ದಶಕಗಳಿಂದ ಮೂಲ ಸೌಕರ್ಯಗಳೇ ಸಿಕ್ಕಿಲ್ಲ. ರೇಷನ್ ಕಾರ್ಡ್ ಇಲ್ಲ,ವಾಸ ಮಾಡಲು ಯೋಗ್ಯವಾದ ಸೂರಿಲ್ಲ.ವಾಸಿಸುವ ಮನೆಗಳು ಇಂದೋ ನಾಳೆ ಕುಸಿದು ಬೀಳುವ ದುಃಸ್ಥಿತಿ ತಲುಪಿದೆ.
ಮಳೆಗಾಲ ಆರಂಭವಾಗಿದೆ. ಪ್ರಾಣಭೀತಿಯಲ್ಲೇ ಜೀವನ ಸಾಗಿಸುತ್ತಿವೆ ಈ ಆದಿವಾಸಿ ಕುಟುಂಬಗಳು. 80 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.ಬೆರಳೆಣಿಕೆ ಕುಟುಂಬಕ್ಕೆ ಮಾತ್ರ ರೇಷನ್ ಕಾರ್ಡ್ ಸಿಕ್ಕಿದೆ.ಆಧಾರ್ ಕಾರ್ಡ್ ಗಾಗಿ ಆದಿವಾಸಿಗಳು ಪರಿತಪಿಸುತ್ತಿದ್ದಾರೆ.
ಚುನಾವಣೆ ವೇಳೆ ಮಾತ್ರ ಜನಪ್ರತಿನಿಧಿಗಳು ಪ್ರತ್ಯಕ್ಷವಾಗುತ್ತಾರೆ. ನಂತರ ತಿರುಗಿಯೂ ನೋಡುವುದಿಲ್ಲ ಎಂದು ಆರೋಪಿಸುತ್ತಾರೆ ಆದಿವಾಸಿಗಳು.
ಆತಂಕದಲ್ಲಿ ದಿನ ದೂಡುತ್ತಿರುವ ಇವರಿಗೆ ಸೌಲಭ್ಯ ಒದಗಿಸದಿದ್ದಲ್ಲಿ ಕಾಡಿಗೆ ಹಿಂದಿರುಗುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿರುವ ಆದಿವಾಸಿಗಳಿಗೆ ನ್ಯಾಯ ಸಿಗುವುದೇ…? ನೆಮ್ಮದಿಯಿಂದ ಜೀವನ ಸಾಗಿಸಲು ಸೂರು ಸಿಗುವುದೇ…? ಹೊಟ್ಟೆ ತುಂಬಿಸಿಕೊಳ್ಳಲು ಪಡಿತರ ಸಿಗುವುದೇ…? ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡಬೇಕಿದೆ…
ಮೂಲ ಸೌಲಭ್ಯಗಳ ವಂಚಿತ ಆದಿವಾಸಿಗಳು.. ಇವರ ಗೋಳು ಕೇಳುವರು ಯಾರು…?
TRENDING ARTICLES