ಬೆಂಗಳೂರು : ವಿಕಾಸಸೌದದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪರಿಷತ್ ಸದಸ್ಯ ಸಿ.ಟಿ ರವಿ ‘ ಯತ್ನಾಳ್ ಟೀಂ ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ. ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಅವರ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಳಿದರು.
ಬಿಜೆಪಿಯಲ್ಲಿನ ಒಳಜಗಳದ ಬಗ್ಗೆ ಮಾತನಾಡಿದ ಪರಿಷತ್ ಸದಸ್ಯ ಸಿ,ಟಿ ರವಿ ‘ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಆದರೆ ಪಕ್ಷದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರಿದ್ದಾರೆ, ಪಕ್ಷದ ಹಿತದೃಷ್ಟಿ ಇಟ್ಟಿಕೊಂಡು ಆಲೋಚಿಸಬೇಕಾಗಿದೆ, ಎಷ್ಟೋ ಜನರು ತಮ್ಮ ಜೀವವನ್ನ ಕೊಟ್ಟು ಮನೆ, ಮಠ ಹಾಳು ಮಾಡಿಕೊಂಡಿದ್ದಾರೆ, ಪಕ್ಷದ ಬೆಳವಣೆಗಾಗಿ ಅಧಿಕಾರ ಮರಿಚಿಕೆ ಆಗಿದ್ದರೂ ಕೂಡ ದುಡಿದಿದ್ದಾರೆ. ಅವರಿಗಾಗಿ ಈ ಜಗಳಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ :ಕಳ್ಳತನದ ಆರೋಪಿಗೆ ಜಾಮೀನು: ಗ್ರಾಮದ ಸುತ್ತ 200 ಗಿಡ ನೆಡುವಂತೆ ಸೂಚಿಸಿದ ನ್ಯಾಯಾಲಯ
ಮುಂದುವರಿದು ಮಾತನಾಡಿದ ಸಿ,ಟಿ ರವಿ ‘ ಕಾಂಗ್ರೆಸ್ ಸರ್ಕಾರ ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ
ನಿತ್ಯ ಮೈಕ್ರೋ ಫೈನಾನ್ಸ್ ವಿಚಾರಕ್ಕೆ ಸಾವಾಗುತ್ತಿವೆ. ಕಳಪೆ ಔಷಧಿಯ ಕಾರಣಕ್ಕೆ ಬಾಣಂತಿಯರು ಸಾವನ್ನಪ್ಪಿದ್ದಾರೆ. ಅಭಿವೃದ್ಧಿ ಅನ್ನೋದು ನಿಂತ ಸ್ಥಿತಿಯಲ್ಲೇ ನಿಂತಿದೆ. ಆಡಳಿತ ಶಾಸಕರಲ್ಲಿಯೇ ಅಸಹನೆ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ನಾವು ಎಲ್ಲರೂ ಒಟ್ಟಾಗಿ ಜನರ ಪರ ಹೋರಾಟ ಮಾಡುವುದು ಕರ್ತವ್ಯವಾಗಿದೆ.
ಹೀಗಾಗಿ ಬಿಜೆಪಿಯಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಸಮಾಧಾನ ತಂದಿಲ್ಲ, ಪಕ್ಷಕ್ಕೆ ಮಾಲೀಕರು ನಾವೆಲ್ಲ, ಪಕ್ಷದ ಮಾಲೀಕರು ನಮ್ಮ ಸಾಮಾನ್ಯ ಕಾರ್ಯಕರ್ತರಿಗೆ ನೋವಾಗುವಂತೆ, ದುಃಖ ತರುವಂತೆ ನಾವು ನಡೆದುಕೊಳ್ಳಬಾರದು. ಜನ ಹಿತವನ್ನ ಮರೆತು ರಾಜಕಾರಣ ಮಾಡಿದ್ರೆ, ಅವರ ಪರವಾಗಿ ಹೋರಾಟ ಮಾಡದಿದ್ದರೆ ನಾವು ಕಳೆದು ಹೋಗುತ್ತೇವೆ ಪಕ್ಷಕ್ಕೂ ನಷ್ಟ ಆಗುತ್ತೆ ಎಂದು ಹೇಳಿದರು.