Tuesday, February 4, 2025

ರಾಕಿಂಗ್​ ಸ್ಟಾರ್​ ಯಶ್​ಗೆ ಮದುವೆ ಆಮಂತ್ರಣ ನೀಡಿದ ಡಾಲಿ

ನಟ ಡಾಲಿ ಧನಂಜಯ್​ ಟಾಕ್ಸಿಕ್​ ಸಿನಿಮಾ ಸೆಟ್​ಗೆ ಭೇಟಿ ನೀಡಿ ನಟ ಯಶ್​​ಗೆ ಮದುವೆ ಆಮಂತ್ರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ತಿಂಗಳೂ 15 ಮತ್ತು 16ರಂದು ಡಾಲಿ ಧನಂಜಯ್​ ಮದುವೆ ಮೈಸೂರಿನಲ್ಲಿ ನಡೆಯಲಿದೆ.

ರಾಕಿ ಭಾಯ್​ ಅಭಿನಯದ ಬಹುನಿರೀಕ್ಷಿತ ಸಿನಿಮಾವಾಗಿರುವ ಟಾಕ್ಸಿಕ್​ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ನ HMT ಫ್ಯಾಕ್ಟರಿ ಆವರಣದಲ್ಲಿ ನಡೆಯುತ್ತಿದೆ. ಈ ಸಿನಿಮಾ ಸೆಟ್​ಗೆ ಭೇಟಿ ನೀಡಿದ ಡಾಲಿ ಧನಂಜಯ್​​ ತಮ್ಮ ವಿವಾಹ ಆಮಂತ್ರಣ ಪತ್ರವನ್ನು ಯಶ್​ಗೆ ನೀಡಿದ್ದಾರೆ.

ಇದನ್ನೂ ಓದಿ :ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹ*ತ್ಯೆ: ವಿಶಯ ತಿಳಿದು ವಿಷ ಸೇವಿಸಿದ ಯುವಕ !

ಕಳೆದ 2 ಎರಡು ತಿಂಗಳಿಂದ ಮದುವೆ ಕೆಲಸದಲ್ಲಿ ಬ್ಯುಸಿ ಆಗಿರುವ ನಟ ಧನಂಜಯ್​ ತಮ್ಮ ಸಿನಿಮಾ ಕಾರ್ಯಗಳಿಗೆ ಬ್ರೇಕ್​ ನೀಡಿದ್ದಾರೆ. ಇದೇ ತಿಂಗಳು 15ರಂದು ಮೈಸೂರಿನ ಅರಮನೆ ಮೈದಾನದಲ್ಲಿ ಧನಂಜಯ್ ವಿವಾಹ ನೆರವೇರಲಿದ್ದು, ಚಿತ್ರದುರ್ಗದ ಧನ್ಯತಾರ ಕೈ ಹಿಡಿಯಲಿದ್ದಾರೆ. ಇನ್ನು ಈ ವಿವಾಹಕ್ಕೆ ಸಿನಿಮಾದ ಗಣ್ಯರು, ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

RELATED ARTICLES

Related Articles

TRENDING ARTICLES