Tuesday, February 4, 2025

ಅಭಿಮಾನಿಗಳನ್ನು ಮನೆಗೆ ಕರೆಸಿ ಆಟೋಗ್ರಾಫ್​ ನೀಡಿದ ಕಿಂಗ್​ ಕೊಹ್ಲಿ

ಹರಿಯಾಣ : ಕ್ರಿಕೆಟ್​ ಲೋಕದ ರನ್​ ಮಷಿನ್​ ಎಂದೆ ಹೆಸರಾಗಿರುವ ಕಿಂಗ್​ ಕೊಹ್ಲಿ ಮತ್ತೊಮ್ಮೆ ತಮ್ಮ ಸರಳತೆಯ ಕಾರಣದಿಂದ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿದ್ದು. ನೋಡಲು ಬಂದಿದ್ದ ಅಭಿಮಾನಿಗಳನ್ನು ಮನೆ ಒಳಗೆ ಕರೆದು ಆಟೋಗ್ರಾಫ್​ ನೀಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಕಿಂಗ್​ ಕೊಹ್ಲಿ ಫಾರ್ಮ್​ ಕೊರತೆಯಿಂದ ಬಳಲುತ್ತಿದ್ಧಾರೆ. ಇಂಗ್ಲೇಡಿನಲ್ಲಿ ನಡೆದ ಬಾರ್ಡರ್​ ಗವಾಸ್ಕರ್​ ಟೆಸ್ಟ್​ನಲ್ಲಿ ಒಂದು ಸೆಂಚುರಿ ಸಿಡಿಸಿದ್ದು ಬಿಟ್ಟರೆ, ಕೊಹ್ಲಿ ಬ್ಯಾಟ್​ನಿಂದ ಹೆಚ್ಚು ರನ್ ಹರಿದು ಬರುತ್ತಿಲ್ಲ. ಫಾರ್ಮ್​ಗಾಗಿ ರಣಜಿ ಕ್ರಿಕೆಟ್​ ಆಡಿದ್ದ ಕೊಹ್ಲಿ ಅಲ್ಲಿಯೂ ಒಂದಂಕಿಗೆ ಔಟ್​ ಆಗಿದ್ದಾರೆ. ಆದರೆ ಇದೇ ಫೆಬ್ರವರಿ 06 ರಿಂದ ಇಂಗ್ಲೇಡ್​ ನಡುವಿನ ಏಕದಿನ ಸರಣಿಗೆ ಕೊಹ್ಲಿ ಸಜ್ಜಾಗುತ್ತಿದ್ದು. ಇದಕ್ಕಾಗಿ ಗುರುಗ್ರಾಮ್​ದಲ್ಲಿರುವ ತನ್ನ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಇದನ್ನೂ ಓದಿ : ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶವಾಯು

ಈ ವೇಳೆ ಕೊಹ್ಲಿಯನ್ನು ಕಾಣುವ ಸಲುವಾಗಿ ನೂರಾರು ಅಭಿಮಾನಿಗಳು ಅವರ ಮನೆಯ ಬಳಿ ಜಮಾಯಿಸುತ್ತಿದ್ದಾರೆ. ಇದರಲ್ಲಿ ಕೆಲವು ಅಭಿಮಾನಿಗಳು ಅವರನ್ನು ನೋಡುವ ಭರವಸೆಯಿಂದ ತಡರಾತ್ರಿಯವರೆಗೂ ಮನೆ ಮುಂದೆ ಕಾದುಕುಳಿತಿದ್ದಾರೆ. ಅಂತಿಮವಾಗಿ ತನ್ನ ಅಭಿಮಾನಿಗಳ ಈ ಅಭಿಮಾನಕ್ಕೆ ಕರಗಿದ ಕೊಹ್ಲಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಲ್ಲದೆ, ವೈಯಕ್ತಿಕವಾಗಿ ಅವರಿಗೆ ಆಟೋಗ್ರಾಫ್‌ಗಳನ್ನು ನೀಡಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಾದ್ಯಂತದ ಕ್ರಿಕೆಟ್ ಪ್ರಿಯರು ಕೊಹ್ಲಿಯನ್ನು ಮನಸಾರೆ ಹೊಗಳಿದ್ದಾರೆ.

RELATED ARTICLES

Related Articles

TRENDING ARTICLES