Monday, February 3, 2025

ಕಣ್ಣಪ್ಪ ಸಿನಿಮಾದಲ್ಲಿ ರುದ್ರನಾದ ಪ್ರಭಾಸ್​: ಫಸ್ಟ್​ ಲುಕ್ ರಿವೀಲ್​

ಪೌರಾಣಿಕ ಕಥಾಹಂದರ ಇರುವ ‘ಕಣ್ಣಪ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಕಣ್ಣಪ್ಪನ ಪಾತ್ರದಲ್ಲಿ ಟಾಲಿವುಡ್​ ನಟ ವಿಷ್ಣು ಮಂಚ್​​ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಪ್ರಭಾಸ್​, ಅಕ್ಷಯ್​ ಕುಮಾರ್​ ಸೇರಿದಂತೆ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಪ್ರಭಾಸ್ ಪೋಸ್ಟರ್​​ ರಿಲೀಸ್ ಆಗಿದೆ ಎಂದು ತಿಳಿದು ಬಂದಿದೆ.

ಹಲವು ಕಾರಣಗಳಿಂದ ಕಣ್ಣಪ್ಪ ಸಿನಿಮಾ ಸಿನಿ ಪ್ರೇಕ್ಷಕರ ಕುತುಹಲ ಕೆರಳಿಸುವನ್ನು ಸಫಲವಾಗಿದ್ದು. ದಕ್ಷಿಣ ಭಾರತದ ಅನೇಕ ನಟರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಪ್ರಭಾಸ್​  ರುದ್ರನಾಗಿ ಕಾಣಿಸಿಕೊಳ್ಳುತ್ತಿದ್ದು. ಪ್ರಭಾಸ್​ನ ಮೊದಲ ಲುಕ್​ ನೋಡಿ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಇದನ್ನೂ ಓದಿ :ಪ್ರಿಯಕರನೊಂದಿಗೆ ಸೇರಿ ಪತಿ ಕೊ*ಲೆ: ಶವವನ್ನು ಕಾವೇರಿ ನದಿಗೆ ಎಸೆದು ಮಿಸ್ಸಿಂಗ್ ಕೇಸ್​ ದಾಖಲಿಸಿದ ಪತ್ನಿ

ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಟ್ಟಕೊಡುವಲ್ಲಿ ಚಿತ್ರತಂಡ ನಿರತವಾಗಿದ್ದು. ಇದೀಗ ಬಿಡುಗಡೆಯಾಗಿರುವ ಫಸ್ಟ್​ ಲುಕ್​ನಲ್ಲಿ ಪ್ರಭಾಶ್​ ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿಯ ಕೋಲು ಹಿಡಿದು ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಇದೆ. ಹೆಗಲಿಗೆ ಕೇಸರಿ ವಸ್ತ್ರವನ್ನು ಹೊದ್ದಿದ್ದಾರೆ. ಹಣೆಯಲ್ಲಿ ವಿಭೂತಿ, ಮುಖದಲ್ಲಿ ಮಂದಹಾಸದೊಂದಿಗೆ ಪ್ರಭಾಸ್ ಅವರು ಕಾಣಿಸಿಕೊಂಡಿದ್ದು, ಈ ಲುಕ್ ವೈರಲ್ ಆಗುತ್ತಿದೆ.

ಎಲ್ಲಾ ಅಂದು ಕೊಂಡಂತೆ ಆದರೆ ಈ ಸಿನಿಮಾ ಏಪ್ರೀಲ್​ 25ಕ್ಕೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ತಂಡ ಘೋಷಿಸಿದೆ.

RELATED ARTICLES

Related Articles

TRENDING ARTICLES