ಚಾಮರಾಜನಗರ :ಪ್ರಿಯಕರನೊಂದಿಗೆ ಸೇರಿ ಸ್ವಂತ ಪತಿಯನ್ನೆ ಕೊಲೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು. ಕೊಲೆ ಮಾಡಿ ಪತಿಯ ಶವವನ್ನು ಕಾವೇರಿ ನದಿಗೆ ಎಸೆದು, ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿದ್ದಾಳೆ. ಆದರೆ ಪೊಲೀಸ್ ತನಿಖೆಯಲ್ಲಿ ಐನಾತಿ ಹೆಂಡತಿಯ ಖರ್ತನಾಖ್ ಕೆಲಸ ಹೊರಬಂದಿದೆ.
ಚಾಮರಾಜನಗರ ಜಿಲ್ಲೆ, ಸಂತೇಮರಳ್ಳಿ ಸಮೀಪದ ಜನ್ನೂರಿನಲ್ಲಿ ಘಟನೆ ನಡೆದಿದೆ. ಮೃತ ರಮೇಶ್ ಮತ್ತು ಗೀತಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಗೀತಾಗೆ ಗುರುಪಾದ ಸ್ವಾಮಿ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಇವರಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಮುಗಿಸಲು ಪ್ಲಾನ್ ರೂಪಿಸಿದ್ದರು.
ಇದನ್ನೂ ಓದಿ :ಟಾಯ್ಲೆಟ್ ಕಮೋಡ್ ನೆಕ್ಕಿಸಿ ರ‍್ಯಾಗಿಂಗ್: 26ನೇ ಮಹಡಿಯಿಂದ ಜಿಗಿದು ಬಾಲಕ ಸಾ*ವು
ಕಳೆದ ತಿಂಗಳು 13ರಂದು ರಮೇಶ್ನನ್ನು ಕೊಲೆ ಮಾಡಿದ್ದ ಇವರು ರಮೇಶ್ ಶವವನ್ನು ಕುಪ್ಪೆಗಾಲದ ಬಳಿ ಸೇತುವೆ ಕೆಳಗೆ ಬಿಸಾಡಿದ್ದರು. ಘಟನೆ ಸಂಬಂಧ ಐನಾತಿ ಹೆಂಡತಿ ಜನವರಿ 21ರಂದು ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಪೊಲೀಸ್ ವಿಚಾರಣೆ ವೇಳೆ ಕಳ್ಳಾಟವಾಡುತ್ತಿದ್ದ ಹೆಂಡತಿ ಇದೀಗ ಪ್ರಿಯಕರ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.