ಬೆಂಗಳೂರು : ಕೆಲವೊಮ್ಮೆ ಯಾವುದೋ ಅವದರದಲ್ಲಿ ಜನರು ಸಂಚಾರಿ ರೂಲ್ಸ್ಗಳನ್ನು ಬ್ರೇಕ್ ಮಾಡುತ್ತಾರೆ. ಇದಕ್ಕೆ ಪೊಲೀಸರು ತಕ್ಕ ದಂಡವನ್ನು ವಿಧಿಸುತ್ತಾರೆ. ಸಂಚಾರಿ ರೂಲ್ಸ್ಗಳ ಬಗ್ಗೆ ಪೊಲೀಸರು ಆಗ್ಗಾಗೆ ಜಾಗೃತಿ ಮೂಡಿಸುತ್ತಲೆ ಇರುತ್ತಾರೆ. ಆದರೆ ಇಲ್ಲೊಂಬ್ಬ ಆಸಾಮಿಗೆ ಸಂಚಾರಿ ರೂಲ್ಸ್ಗಳನ್ನು ಬ್ರೇಕ್ ಮಾಡುವುದೇ ಚಠವಾಗಿರುವಂತೆ ಕಾಣುತ್ತಿದೆ.
ಹೌದು.. ಬೈಕ್ ಸವಾರನೋರ್ವನ ವಿರುದ್ದ ಸಾರ್ವಜನಿಕರು ಟ್ವಿಟ್ ಮಾಡಿ ಸಂಚಾರಿ ಪೊಲೀಸ್ ಇಲಾಖೆಗೆ ಪ್ರಶ್ನೆ ಮಾಡಿದ್ದಾರೆ. ಯಾಕೆ ಅಂತೀರ, ಇಲ್ಲೊಬ್ಬ ಬೈಕ್ ಸವಾರನ ಬೈಕ್ ಬೆಲೆಗಿಂತಲೂ ಹೆಚ್ಚು ದಂಡವನ್ನು ಪೊಲೀಸರು ವಿಧಿಸಿದ್ದಾರೆ. 80 ಸಾವಿರ ಬೈಕ್ಗೆ 1.61ಲಕ್ಷರೂ ದಂಡವನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. KA05 JX 1344 ನಂಬರ್ ದ್ವಿಚಕ್ರ ವಾಹನದ ಮೇಲೆ ದಂಡ ವಿಧಿಸಲಾಗಿದೆ.
ಇದನ್ನೂ ಓದಿ :ರಾಷ್ಟ್ರಿಯ ಪಕ್ಷಕ್ಕೆ ಸೇರಬೇಕು ಎಂಬ ಆಸೆ ಇದ್ದರೆ ಸೇರಿಕೊಳ್ಳಿ: ಜೆಡಿಎಸ್ ಕಾರ್ಯಕರ್ತರಿಗೆ ಡಿಕೆಶಿ ಆಫರ್
ಕಳೆದ ವರ್ಷ 1 ಲಕ್ಷ 5 ಸಾವಿರ ದಂಡ ಹೊಂದಿದ್ದ ಈ ದ್ವಿಚಕ್ರ, ಈ ವರ್ಷ 56 ಸಾವಿರ ದಂಡ ವಿಧಿಸಲಾಗಿದೆ. ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಸೇರಿದಂತೆ ಅನೇಕ ಉಲ್ಲಂಘನೆಗಳನ್ನು ಈತ ಮಾಡಿದ್ದು. ಯಾಕೆ ಇನ್ನು ಈತನ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.