Monday, February 3, 2025

ಕೆರೆಯಲ್ಲಿ ಈಜಲು ಹೋಗಿ ಸಾ*ವು: ದುರಂತ ಅಂತ್ಯ ಕಂಡ ಸ್ನೇಹಿತರು

ಹಾಸನ : ಕೆರೆಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಹಾಸನದಲ್ಲಿ ನಡೆದಿದ್ದು. ಮೃತ ಯುವಕರನ್ನು ಯಶ್ವಂತ್‌ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಜಿನ್ನಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಸ್ನೇಹಿತರು, ಭಾನುವಾರ ಕೆಲಸ ಮುಗಿಸಿ ಸಂಜೆ ಕೆರೆಗೆ ಈಜಲು ತೆರಳಿದ್ದರು. ಸರಿಯಾಗಿ ಈಜಲು ಬಾರದ ಇಬ್ಬರು ಈಜು ಕಲಿಯಲು ಎಂದು ಕೆರೆಗೆ ಬಂದಿದ್ದರು. ಈ ವೇಳೆ ಮೊದಲು ರೋಹಿತ್​ ಕೆರೆಗೆ ಧುಮುಕಿದ್ದನು. ಈ ವೇಳೆ ಕೆರೆಯಲ್ಲಿ ಬೆಳೆದಿದ್ದ ಬಳ್ಳಿ ರೋಹಿತ್​ ಕಾಲಿಗೆ ಸುತ್ತಿಕೊಂಡು ರೋಹಿತ್​ ಮೇಲೆ ಬರಲಾಗದೆ ಒದ್ದಾಡಿದ್ದಾನೆ.

ಇದನ್ನೂ ಓದಿ :ಅಯೋಧ್ಯೆಯ ಬಳಿ ಕಣ್ಣುಗುಡ್ಡೆ ಕಿತ್ತು ಯುವತಿಯ ಅತ್ಯಾಚಾರ-ಹ*ತ್ಯೆ: ಶ್ರೀರಾಮ, ತಾಯಿ ಸೀತಾ, ನೀವು ಎಲ್ಲಿದ್ದೀರಿ? ಎಂದ ಸಂಸದ

ಈ ವೇಳೆ ಗೆಳೆಯನನ್ನು ರಕ್ಷಿಸಲೆಂದು ಯಶ್ವಂತ್​ ಸಿಂಗ್​ ಕೆರೆಗೆ ಜಿಗಿದ್ದಿದ್ದಾನೆ. ಈ ವೇಳೆ ಈತನ ಕಾಲಿಗೂ ಬಳ್ಳಿ ಸುತ್ತಿಕೊಂಡಿದ್ದು. ಈಜಲ ಸಾಧ್ಯವಾಗದೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ನಿನ್ನೆ ತಡರಾತ್ರಿ ಇಬ್ಬರು ಯುವಕರ ಶವವನ್ನು ಹೊರಗೆ ತೆಗೆದಿದ್ದು. ಶ್ರವಣ ಬೆಳಗೊಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES