Saturday, February 1, 2025

ಪವರ್​ ಟಿವಿ ಮುಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

ಶಿವಮೊಗ್ಗ: ರಾಜ್ಯದಲ್ಲೇ ಮನೆ ಮಾತಾಗಿರುವ ಪವರ್ ಟಿವಿಗೆ ಮತ್ತೊಂದು ರಾಜ್ಯ ಪ್ರಶಸ್ತಿಯ ಗರಿ ಸಿಕ್ಕಿದ್ದು.
ಪವರ್ ಟಿ.ವಿ. ಎಂ.ಡಿ. ರಾಕೇಶ್ ಶೆಟ್ಟಿಯವರಿಗೆ ಸುರಭಿ ಶ್ರೀ ರಾಜ್ಯ ಪ್ರಶಸ್ತಿ ಸನ್ಮಾನ ದೊರೆತಿದೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಡಾ.ರಾಜಕುಮಾರ್ ರಂಗಮಂದಿರದಲ್ಲಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಸುರಭಿವಾಣಿ ಪತ್ರಿಕೆಯ 11ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದು. ಪತ್ರಿಕೆಯ ಸಂಪಾದಕ ರಾಮಚಂದ್ರ ಅವರ ನೇತೃತ್ವದಲ್ಲಿ ಸಮಾರಂಬ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಡಾ. ಕಾಗೋಡು ತಿಮ್ಮಪ್ಪರಿಗೂ ರಾಜ್ಯ ಪ್ರಶಸ್ತಿಯ ಗೌರವ ಸಂಧಿದ್ದು. ಖ್ಯಾತ ಉದ್ಯಮಿ ಡಾ.ಎಂ.ವಿ ಕೃಷ್ಣಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 8 ಮಹನೀಯರಿಗೆ ಸುರಭಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಇದನ್ನೂ ಓದಿ :ಭಾವಿ ಪತಿಯನ್ನು ಪರಿಚಯಿಸಿದ ನಿರೂಪಕಿ ಚೈತ್ರಾ ವಾಸುದೇವನ್​

ಸಮಾರಂಭದಲ್ಲಿ ಶಿಕಾರಿಪುರದ ಮಳೆ ಮಲ್ಲೇಶ್ವರ ತಪೋಕ್ಷೇತ್ರದ ಶ್ರೀಗಳಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಜಗಳೂರು ಕಣ್ವಕುಪ್ಪೆ ಗವಿಮಠದ ಶ್ರೀಗಳಾದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದಿದ್ದು. ಪವರ್ ಟಿವಿ ಎಂ.ಡಿ. ರಾಕೇಶ್ ಶೆಟ್ಟಿ ಅನುಪಸ್ಥಿತಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಮಧುಸೂದನ್​ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಂತಸ ವ್ಯಕ್ತಪಡಿಸಿದ ಪವರ್ ಟಿವಿ ನಿರ್ದೇಶಕರು !

ಪವರ್ ಟಿವಿ ಎಂ.ಡಿ. ರಾಕೇಶ್ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ನಿರ್ದೇಶಕ ಮಧುಸೂಧನ್ ಅವರು ‘ನಮ್ಮ ಎಂಡಿಯವರ ಪರವಾಗಿ ಇಂದು ನಾನು ಪ್ರಶಸ್ತಿ ಸ್ವೀಕರಿಸಿದ್ದೇನೆ, ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಶಯವಾಗಿದ್ದು. ಈ ಪ್ರಶಸ್ತಿ ನಮ್ಮ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಸುರಭಿವಾಣಿ ಪತ್ರಿಕೆ ಕಳೆದ 11 ವರ್ಷಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿಕೊಂಡು ಬಂದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ನಿರ್ದೇಶಕ ಮಧುಸೂದನ್. ಈ ಸಮಾರಂಭ ಆಯೋಜಿಸಿರುವ ಸಂಸ್ಥೆಯ ಎಲ್ಲರ ಮನಸ್ಥಿತಿ, ಮನೆಸ್ಥಿತಿ, ಮನಿಸ್ಥಿತಿ ಉತ್ತಮವಾಗಲಿ ಎಂದು ಶುಭ ಹಾರೈಸಿದರು.

RELATED ARTICLES

Related Articles

TRENDING ARTICLES