ಬೆಂಗಳೂರು : ಕೇಂದ್ರ ಬಜೆಟ್ ಕುರಿತು ಕಾನೂನು ಸಂಸದೀಯ ಸಚಿವ ಎಚ್ಕೆ ಪಾಟೀಲ್ ಲೇವಡಿ ಮಾಡಿದ್ದು. ಇದು ಬಜೆಟ್ ಅಲ್ಲ, ಬಿಹಾರ ಚುನಾವಣೆಯ ಪ್ರಣಾಳಿಕೆ ಎಂದು ಹೇಳಿದರು.
ಕೇಂದ್ರದ ಬಜೆಟ್ ಕುರಿತು ಲೇವಡಿ ಮಾಡಿದ ಸಚಿವ ಎಚ್.ಕೆ ಪಾಟೀಲ್ ‘ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪರಿಹಾರ ನೀಡಿಲ್ಲ. ಇದು ಒಂದು ಬಜೆಟ್ಟಾ.. ಇದು ಬಿಹಾರ ಚುನಾವಣೆಯ ಮ್ಯಾನಿಫ್ಯಾಸ್ಟೋ. ಈ ಬಾರಿಯ ಬಜೆಟ್ನಲ್ಲಿ ಏನೇನೋ ನಿರೀಕ್ಷೆ ಇತ್ತು. ಆದರೆ ಏನೂ ನೀಡಿಲ್ಲ. ಬಜೆಟ್ ಸಂಪೂರ್ಣ ನಿರಾಶಾದಾಯಕ ಬಜೆಟ್ ಎಂದು ಹೇಳಿದರು.
ಇದನ್ನೂ ಓದಿ :ಕೇಂದ್ರ ಸರ್ಕಾರ ಬಜೆಟ್ನಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಪರಿಹಾರ ನೀಡಿಲ್ಲ: ಎಚ್.ಕೆ ಪಾಟೀಲ್
ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ಕೃಷಿಕರಿಗೆ ಇರುವ ತೊಂದರೆ ಬಗ್ಗೆ ಗಮನ ಹರಿಸಿಲ್ಲ, ಮೈಕ್ರೋ ಫೈನಾನ್ಸ್ ನಿಂದ ಜನರು ಆತ್ಮಹತ್ಯೆ ಮಾಡ್ಕೋಂತಿದ್ದಾರೆ. ಅದಕ್ಕೆ ಪರಿಹಾರ ಕೊಡಬೇಕು ಎಂಬ ಆಲೋಚನೆಯೂ ಬರಲಿಲ್ಲ. ಇವುಗಳಿಂದ ಆಂದ್ರ, ತೆಲಂಗಾಣ, ಕರ್ನಾಟಕದಲ್ಲಿ ಸಮಸ್ಯೆ ಆಗಿದೆ. ಆರ್ಬಿಐ ನೋಂದಾಯಿತ ಫೈನಾನ್ಸ್ಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಚಕಾರ ಎತ್ತಿಲ್ಲ ಎಂದು ಹೇಳಿದರು.