Tuesday, January 14, 2025

ಕೊಡಗು ಜಿಲ್ಲೆಯಲ್ಲಿ ಮತ್ತೆ ಕಾಡಾನೆ ಹಾವಳಿ

ಕೊಡಗು : ಕಾಡಾನೆ ದಾಳಿಯಿಂದಾಗಿ ವ್ಯಕ್ತಿಯೋರ್ವ ಗಂಭೀರಾವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಕೊಳತ್ತೋಡು ಎಂಬಲ್ಲಿ ನಡೆದಿದೆ.
ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ನಡಿಯುತ್ತಲೆ ಇರುತ್ತದೆ. ಆಹಾರ ಅರಸಿ ನಾಡಿಗೆ ಬರೋ ಆನೆಗಳು ಮಾನವನ ಮೇಲೆ ದಾಳಿ ಮಾಡೋದು ಇದೀಗ ಜಿಲ್ಲೆಯಲ್ಲಿ ಸಾಮನ್ಯವಾಗಿದೆ. ನೆನ್ನೆ ರಾತ್ರಿ ಸುಮಾರು 7 ಗಂಟೆ ವೇಳೆ ಗೋಣಿಕೊಪ್ಪ ಸಮೀಪದ ಕೊಳತ್ತೋಡು ಎಂಬಲ್ಲಿ ಮೂರು ನಾಲ್ಕು ಮಂದಿ ಮನೆಗೆ ನಡೆದುಕೊಂಡು ಹೋಗೊ ಸಂದರ್ಭ ಎದುರಾದ ಕಾಡಾನೆ ಮಾದ (50) ಎಂಬುವುವನ ಮೇಲೆ ದಾಳಿ ನಡೆಸಿದ್ದು ಮಾದ ಎಂಬ ಕಾರ್ಮಿಕನ್ನ ತೋಟದೊಳಗೆ ಎಳೆದ್ಯೋದು ಗಾಸಿಗೊಳಿಸಿದೆ. ಜೊತೆಗಿದ್ದ ಉಳಿದ ಮಂದಿ ಭಯದಿಂದ ಓಡಿ ಹೋಗಿದ್ದಾರೆ. ಬಳಿಕ ಮಾದನ ನರಳಾದ ಕೇಳಿ ನಂತರ ಸ್ಥಳೀಯರು ಪಟಾಕಿ ಸಿಡಿಸಿದ್ದಾರೆ. ಈ ಸಂಧರ್ಭದ ಆನೆ ಘೀಳಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ಬಳಿಕ ಹುಡುಕಾಟ ನಡೆಸಿದ ಸ್ಥಳೀರು ಗಂಭೀರವಾಗಿ ಗಾಯಗೊಂಡ ಮಾದನನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ಆನೆ ದಾಳಿಯಿಂದ ಆ ಭಾಗದ ಜನರಲ್ಲಿ‌ ಆತಂಕ ಮನೆ ಮಾಡಿದೆ.

RELATED ARTICLES

Related Articles

TRENDING ARTICLES