ಬಳ್ಳಾರಿ : ರಾಜ್ಯದಲ್ಲಿ 36 ಗಂಟೆಗಳ ಲಾಕ್ ಡೌನ್ ಗೆ ಬಳ್ಳಾರಿಯಲ್ಲಿ ಬೆಳ್ಳಂಬೆಳಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಬಹುತೇಕ ಕ್ಲೋಸ್ ಆಗಿದ್ದರೂ ಸಹ ಜನರ ಓಡಾಟ ಮಾತ್ರ ನಿರಾತಂಕವಾಗಿದೆ. ಬಳ್ಳಾರಿಯ ಹೃದಯ ಭಾಗವಾದ ರಾಯಲ್ ಸರ್ಕಲ್ ಮತ್ತು ಮೋತಿ ಸರ್ಕಲ್ ನಲ್ಲಿ ಬಹುತೇಕ ಜನಸಂಚಾರ ಸ್ತಬ್ಧವಾಗಿದೆ. ಉಳಿದಂತೆ ನಗರದ ವಿವಿದೆಡೆ ಜನಸಂಚಾರ ಯಥಾಪ್ರಕಾರ ಸಾಗಿದೆ. ಸ್ವೀಟ್ ಮಾರ್ಕೇಟ್ ಸೇರಿದಂತೆ ಅನೇಕ ಕಡೆ ದಿನವಾಹಿ ವಹಿವಾಟು ಸಾಗಿದೆ. ಹೂವಿನ ಅಂಗಡಿಗಳು ಓಪನ್ ಆಗಿದ್ದು ತರಕಾರಿ, ದಿನಸಿ ಮತ್ತು ಮೆಡಿಕಲ್ ಶಾಪ್ ಗಳು ಓಪನ್ ಅಗಿವೆ. ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಇದ್ರೂ ಸಹ ಜನ ಮನೆಯಿಂದ ಹೊರಬರ್ತಿದ್ದಾರೆ. ಆಟೋ ಗೂಡ್ಸ್ ಸಹ ಸಂಚಾರ ಮಾಡ್ತಿವೆ.
ವಿವಿದೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದ್ರು ಸಹ ಜನ ಪೊಲೀಸರ ಕಣ್ತಪ್ಪಿಸಿ ಓಡಾಡ್ತಿರೋದು ಕಂಡುಬರ್ತಿದೆ. ಜಿಲ್ಲೆಯಾದ್ಯಾಂತ 5 ಡಿಎಸ್ಪಿ, 23 CPI , 66 PSI ಹಾಗೂ ಗೃಹರಕ್ಷಕದಳದ ಸಿಬ್ಬಂದಿಯನ್ನು ಸೇರಿಸಿ 2500 ಕ್ಕೂ ಹೆಚ್ಚು ಸಿಬ್ಬಂದಿಯನ್ನ ಲಾಕ್ ಡೌನ್ ಪಾಲನೆ ನಿರ್ವಹಿಸಲು ನಿಯೋಜಿಸಲಾಗಿದೆ. ಇಷ್ಟೆಲ್ಲ ಇದ್ರೂ ಸಹ ಜನ ಅಗತ್ಯ ಖರೀದಿಯ ನೆಪದಲ್ಲಿ ಓಡಾಟ ನಡೆಸ್ತಿರೋದು ಕಂಡು ಬರ್ತಿದೆ.
ಇನ್ನೊಂದು ಘಂಟೆಯವರೆಗೂ ನೋಡುತ್ತೇವೆ ಜನ ಓಡಾಟವನ್ನು ನಿಲ್ಲಿಸದೇ ಹೋದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಅಂತ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ..