ಬಳ್ಳಾರಿ: ನಗರದಲ್ಲಿ ಲಾಕ್ ಡೌನ್ ಗೆ ಕ್ಯಾರೇ ಎನ್ನದೆ ರೇಣುಕಾ ಕಿಚನ್ ನ ಹೊಟೇಲ್ ಮಾಲೀಕರು ಎಂದಿನಂತೆ ಹೋಟೆಲ್ ತೆರೆದಿದ್ದಾರೆ.
ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇದ್ದರೂ ಜಿಲ್ಲಾಡಳಿತ ನಿಯಮ ಉಲಂಘಿಸಿ ಹೋಟೆಲ್ ತೆರೆದಿರುವ ಇವರಿಗೆ ಲಾಕ್ ಡೌನ್ ಅನ್ವಯ ಆಗೋಲ್ವ? ಎಂದು ನಗರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಣುಕಾ ಹೋಟೆಲ್ ಬಳ್ಳಾರಿಯ ಪ್ರಭಾವಿ ವ್ಯಕ್ತಿಗೆ ಸೇರಿದ್ದೆನ್ನಲಾಗಿದೆ. ಜನ ಸಾಮನ್ಯರು ಓಡಾಡಿದರೆ ಕೇಸ್ ಮಾಡ್ತಾರೆ, ಇವರಿಗೆ ರೂಲ್ಸ್ ಅಪ್ಲೈ ಆಗಲ್ವ? ಒಬ್ಬರಿಗೊಂದು ನ್ಯಾಯಾನಾ? ಸಾರ್ವಜನಿಕರು ಆಕ್ರೋಶದ ಪ್ರಶ್ನೆ ಎತ್ತಿದ್ದಾರೆ.
ಬಳ್ಳಾರಿ ಸಂಡೇ ಲಾಕ್ ಡೌನ್ ಹಿನ್ನೆಲೆ, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಪಹರೆ ಇದ್ದು, 250 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 5 ಡಿ ಎಸ್ ಪಿ, 23 ಸಿಪಿಐ, 66 ಪಿ ಎಸ್ ಐ ಒಳಗೊಂಡ ತಂಡವೆ ನಿಯೋಜಿಸಿ ಬಳ್ಳಾರಿ ಎಸ್ ಪಿ ಸಿಕೆ ಬಾಬಾ ಅವರು ಪರಿಸ್ಥಿತಿ ನಿಯಂತ್ರಿಸಿ ಲಾಕ್ ಡೌನ್ ಯಶಸ್ವಿಗೊಳಿಸಲು ಆದೇಶ ಹೊರಡಿಸಿದ್ದಾರೆ. ಮನೆಯಿಂದ ತುರ್ತುಪರಿಸ್ಥಿತಿಯನ್ನು ಹೊರತು ಪಡಿಸಿ ಅನಾವಶ್ಯಕವಾಗಿ ಹೊರಬರದಂತೆ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಷ್ಟೆಲ್ಲಾ ನಿಯಮಗಳನ್ನು ಜಾರಿಗೊಳಿಸಿಯೂ ರೇಣುಕಾ ಹೋಟೆಲ್ ತೆರೆಯಲು ಅವಕಾಶ ದೊರೆತದ್ದಾದರೂ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.