Thursday, January 30, 2025

ಹಾಡಹಗಲೇ ಗುಂಡಿನ ದಾಳಿ :ಮಗಳ ಸಾವಿಗೆ ಸೇಡು ತೀರಿಸಿಕೊಂಡನಾ ತಂದೆ..!

ವಿಜಯಪುರ : ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು. ದುಷ್ಕರ್ಮಿಗಳು ಕಾರಿನ ಮೇಲೆ ಗುಂಡು ಹಾರಿಸಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಯುವಕನನ್ನು ಸತೀಶ್​ ರಾಠೋಡ್​ ಎಂದು ಗುರುತಿಸಲಾಗಿದೆ.

ರಮೇಶ್​ ಚೌಹಾಣ್​ ಮತ್ತು ಇತರರಿಂದ ದುಷ್ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು. ಘಟನೆ ನಡೆದ ಸ್ಥಳದಲ್ಲಿ ಹಲ್ಲೆಕೋರನೊಬ್ಬನ ಕಿವಿ ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬಗ್ಗೆ ಸತೀಶ್​ ತಂದೆ ಆರೋಪ ಮಾಡಿದ್ದು. ಯುವತಿಯೊಬ್ಬಳ ತಂದೆ ತನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ಹಿನ್ನಲೆ !

ಮೃತ ಸತೀಶ್ ರಾಠೋಡ್​ ಕಳೆದ ಒಂದೆವರೆ ವರ್ಷದ ಹಿಂದೆ ರಮೇಶ್​ ಚೌವ್ಹಾಣ್​ ಪುತ್ರಿಯನ್ನು ಮದುವೆ ಮಾಡಿಕೊಡುವಂತೆ ಪ್ರಸ್ತಾಪ ಮಾಡಿದ್ದನು. ಆದರೆ ರಮೇಶ್​ ತನ್ನ ಮಗಳನ್ನು ಈತನಿಗೆ ಕೊಡಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶ್​ ಮಗಳು ಬಾವಿಗೆ ಬಿದ್ದು ಮೃತಪಟ್ಟಿದ್ದಳು.

  1. ಇದನ್ನೂ ಓದಿ : ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಗುತ್ತಾ : ಖರ್ಗೆ ಹೇಳಿಕೆಗೆ ಪರಿಷತ್​​ ಸದಸ್ಯ ರವಿಕುಮಾರ್​ ಲೇವಡಿ !

ತನ್ನ ಮಗಳು ಸಾಯಲು ಕಾರಣ ಈತನೇ ಎಂಬ ದ್ವೇಷ ರಮೇಶ್​ ಮತ್ತು ಆತನ ಸಹಚರರಿಗೆ ಇತ್ತು. ಅದೇ ಕಾರಣಕ್ಕೆ ಇಂದು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್​ ತಂದೆ ಪ್ರೇಮ್​ ಸಿಂಗ್​ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ವಿಜಯಪುರ ಎಸ್​.ಪಿ ಲಕ್ಷ್ಮಣ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಘಟನೆಗೆ ಕಾರಣವೇನು ಎಂಬುದು ತನಿಖೆ ನಂತರವೇ ಹೊರಗೆ ಬರಬೇಕಿದೆ. ಘಟನಾ ಸ್ಥಳದಲ್ಲಿ ಮೃತ ಸತೀಶ್​ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES