ಕೋಲಾರ : ಕೋಲಾರ ಜಿಲ್ಲೆಯಲ್ಲಿ ಭಾನುವಾರ ಸಂಪೂರ್ಣ ಲಾಕ್ಡೌನ್ಗೆ ಜಿಲ್ಲಾಡಳಿತ ಆದೇಶಿಸಿದೆ. ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿದ್ರೆ ಭಾನುವಾರ ಕೋಲಾರ ಜಿಲ್ಲೆಯಾದ್ಯಂತ ಎಲ್ಲವೂ ಬಂದ್ ಆಗಲಿದೆ. ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಮೆಡಿಕಲ್ ಶಾಪ್ಗಳು, ಪೆಟ್ರೋಲ್ ಬಂಕ್ಗಳು, ತರಕಾರಿ ಹಾಗೂ ಮಾಂಸದ ಅಂಗಡಿಗಳು ತೆರೆಯಲಿದೆ. ಸಾರಿಗೆ ಸೇರಿದಂತೆ ಉಳಿದೆಲ್ಲವೂ ಸಂಪೂರ್ಣವಾಗಿ ಬಂದ್ ಆಗಲಿದೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಮಾಹಿತಿ ನೀಡಿದ್ರು.
ಭಾನುವಾರ ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ ಗೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ್ರೆ, ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆಯಲು ಕೋಲಾರ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಮಾರುಕಟ್ಟೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನ ಕಾಪಾಡುವಂತೆ ಡಿ ಸಿ ಸತ್ಯಭಾಮ ಸೂಚಿಸಿದ್ದಾರೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.