ಚಿಕ್ಕಬಳ್ಳಾಪುರ : ನರಕ ಲೋಕದ ಅಧಿಪತಿಗಳಾದ, ಪಾಪಗಳನ್ನು ಮಾಡುವ ಜನರನ್ನು ಶಿಕ್ಷಿಸುವ ಯಮ ಮತ್ತು ಚಿತ್ರಗುಪ್ತ ರಸ್ತೆಯಲ್ಲಿ ಪ್ರತ್ಯಕ್ಷರಾಗಿದ್ದು. ಗಧೆ ಮತ್ತು ಆಯಸ್ಸಿನ ಪುಸ್ತಕವನ್ನಿಡಿದು ಹೆಲ್ಮೆಟ್ ಧರಿಸದೆ ಬರುವ ಜನರಿಗೆ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಯಲ್ಲಿ ಯಮ ಚಿತ್ರದುರ್ಗ ಹಠಾತನೆ ಪ್ರತ್ಯಕ್ಷರಾಗಿದ್ದಾರೆ. ಚಿಕ್ಕಬಳ್ಳಾಪುರದ ಪೊಲೀಸರು ಮತ್ತು ಆರ್ಟಿಓ ಅಧಿಕಾರಿಗಳು ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು. ನಗರದ ಶಿಡ್ಲಘಟ್ಟ ಸರ್ಕಲ್ ಬಳಿಯಲ್ಲಿ ಪೊಲೀಸರು ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದ್ದಾರೆ.
ಇದನ್ನು ಓದಿ :ಆಸ್ತಿಗಾಗಿ ಹೆತ್ತವರ ಕೈ-ಕಾಲನ್ನೆ ಮುರಿದ ಪಾಪಿ ಪುತ್ರ !
ಹೆಲ್ಮೆಟ್ ಧರಿಸದೆ ಬರುವ ವಾಹನ ಸವಾರರನ್ನು ಟಾರ್ಗೆಟ್ ಮಾಡಿಕೊಂಡಿರುವ ಯಮಧರ್ಮ. ಅವರ ಗಾಡಿಯನ್ನು ನಿಲ್ಲಿಸಿ ಹೆಲ್ಮಟ್ ಧರಿಸುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಹೆಲ್ಮೆಟ್ ಧರಿಸದಿದ್ದರೆ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಪೊಲೀಸರ ಈ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.