ಏರ್ಹೋಸ್ಟಸ್ ಕೆಲಸ ಎಂದರೆ ಹಾಗೆ. ಪ್ರತಿ ದಿನ ಒಂದು ದೇಶ, ಪ್ರತಿ ದಿನ ಪ್ರಯಾಣವಿರುತ್ತದೆ. ಅತ್ಯುತ್ತಮ ಮಟ್ಟದ ಸೌಲಭ್ಯ ನೀಡಿದರು ಕೂಡ ಮನೆ, ಪೋಷಕರ ಪ್ರೀತಿ ತಪ್ಪುತ್ತಿದೆ ಎಂದು ಭಾವ ಕಾಡುತ್ತಿರುತ್ತಿದೆ. ಇದೇ ಕಾರಣಕ್ಕೆ ಚೀನಾದ ಏರ್ಹೊಸ್ಟಸ್ ಒಬ್ಬಳು ತನ್ನ ಕೆಲಸಕ್ಕೆ ರಾಜಿನಾಮೇ ನೀಡಿ ಪೋಷಕರ ಜೊತೆ ಹಂದಿ ಸಾಕಾಣೆಗೆ ಇಳಿದಿದ್ದಾಳೆ.
ಹೌದು.. ಚೀನಾದ ಶಾಂಘೈನ ಯಾಂಗ್ ಯಾಂಕ್ಸಿ ಎಂಬ 27 ವರ್ಷ ವಯಸ್ಸಿನ ಯುವತಿ ಫ್ಲೈಟ್ ಅಟೆಂಡೆಂಟ್ ಕೆಲಸವನ್ನು ಬಿಟ್ಟು ಹಂದಿ ಸಾಕಣೆ ಮಾಡುತ್ತಿದ್ದಾಳೆ. ಮೂಲತಃ ಈಶಾನ್ಯ ಚೀನಾದ ಹೈಲಾಂಗ್‌ಜಿಯಾಂಗ್ ಪ್ರಾಂತ್ಯದಿಂದ ಬಂದ ಈಕೆ ಉನ್ನತ ವಿಮಾನಯಾನ ಕಂಪೆನಿಯಲ್ಲಿ 5 ವರ್ಷಗಳ ಕಾಲ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ನಂತರ ಆಕೆ ಈ ಕೆಲಸವನ್ನು ತೊರೆದು ಹಂದಿ ಸಾಕಣೆ ಕೆಲಸವನ್ನು ಶುರು ಮಾಡಿದ್ದಾಳೆ. ಹೌದು ಈಕೆ ತನ್ನ ಸಂಬಂಧಿಕರ ಜಮೀನಿನಲ್ಲಿ ಹಂದಿ ಫಾರ್ಮ್ ಒಂದನ್ನು ನಡೆಸುತ್ತಿದ್ದಾಳೆ.
ಇದನ್ನೂ ಓದಿ: ವೈದ್ಯರ ನಿರ್ಲಕ್ಷ : ಹೆಣ್ಣು ಮಗುವಿಗೆ ಜನ್ಮ ಕೊಟ್ಟು ಸಾ*ವನ್ನಪ್ಪಿದ ಮಹಿಳೆ !
ತನ್ನ ಹೆತ್ತವರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವ ಉದ್ದೇಶದಿಂದ ಏರ್ ಹೋಸ್ಟೆಸ್ ಕೆಲಸವನ್ನು ತೊರೆದು ಇದೀಗ ಯುವತಿ ಹಂದಿ ಫಾರ್ಮ್ ನಡೆಸಿಕೊಂಡು ಹೋಗುತ್ತಿದ್ದಾಳೆ. ಜೊತೆಗೆ ಆಕೆಯ ಪೋಷಕರು ಯಾವಾಗಲು ಒಳ್ಳೆಯ ಸುದ್ದಿಗಳನ್ನು ಹೇಳುತ್ತಿದ್ದರು, ಆದರೆ ಕೆಟ್ಟ ಅಥವಾ ಬೇಜಾರಿನ ವಿಷಯಗಳನ್ನು ಮರೆ ಮಾಚುತ್ತಿದ್ದರು. ಇದೆಲ್ಲಾ ನನಗೆ ಗೊತ್ತೇ ಆಗುತ್ತಿರಲಿಲ್ಲ. ಈ ಕಾರಣದಿಂದಾಗಿ ಹೆತ್ತವರಿಗಾಗಿ ನಾನು ಅವರ ಬಳಿಯಿದ್ದೇ ಕೆಲಸ ಮಾಡಲು ನಿರ್ಧರಿಸಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಏಪ್ರಿಲ್ 2023 ರಲ್ಲಿ ಯಾಂಗ್ ಸಂಬಂಧಿಕರ ಜಮೀನಿನಲ್ಲಿ ಹಂದಿ ಫಾರ್ಮ್ ಶುರು ಮಾಡಿದಳು. ಈಗ ಆಕೆ ಹಂದಿಗಳ ಆಹಾರ ತಯಾರಿಸುವುದರಿಂದ ಹಿಡಿದು ಅವುಗಳನ್ನು ಸಾಕುವುದರವರೆಗೆ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದಾಳೆ. ಜೊತೆಗೆ ಆಕೆ ತನ್ನ ಹಳ್ಳಿ ಬದುಕಿಗೆ ಸಂಬಂಧಿಸಿದ ವ್ಲಾಗ್‌ಗಳನ್ನು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ.