Friday, January 24, 2025

ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶು ಆಸ್ಪತ್ರೆಗೆ ಕರೆದೊಯ್ದ ಶ್ವಾನ : ವಿಡಿಯೋ ವೈರಲ್​

ಪ್ರಪಂಚದಲ್ಲಿ ಬಹುಶಃ ತಾಯಿ ಪ್ರೀತಿ ಎಂಬುದು ಹಾಗೇ, ಮನುಷ್ಯರಷ್ಟೆ ಅಲ್ಲದೆ, ಪ್ರಾಣಿಗಳು ಕೂಡ ತಮ್ಮ ಮಕ್ಕಳ ಸಾಕಷ್ಟು ಪ್ರೀತಿಸುತ್ತವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೇವೆ. ಇದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದ್ದು. ಶ್ವಾನವೊಂದು ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶು ಆಸ್ಪತ್ರೆಗೆ ಬಂದಿದೆ.

ಹೌದು.. ತಾಯಿ ಪ್ರೀತಿನೇ ಹಾಗೆ, ವಿವರಿಸಲು ಅಸಾಧ್ಯ. ಈ ನಿಸ್ವಾರ್ಥ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ.

ಇದನ್ನೂ ಓದಿ: ಸವರ್ಣಿಯರ ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಲಿತ ಕುಟುಂಬ !

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ‘ನಾಯಿ ತನ್ನ ಮರಿಯನ್ನು ಹೊತ್ತುಕೊಂಡು ಕ್ಲಿನಿಕ್‍ನ ಬಾಗಿಲ ಬಳಿ ಬಂದು ನಿಂತಿದೆ. ಆ ವೇಳೆ ಆರೋಗ್ಯ ಕೇಂದ್ರದ ಸಿಬ್ಬಂದಿ ಅದನ್ನು ಗಮನಿಸಿ, ತಕ್ಷಣವೇ ಬಾಗಿಲನ್ನು ತೆರೆದಿದ್ದಾರೆ. ಆ ಬಳಿಕ ನಾಯಿ ಮರಿಯನ್ನು ವೈದ್ಯರು ಪರೀಕ್ಷಿಸಿದ್ದು, ದೇಹ ತಣ್ಣಗಾಗಿದ್ದನ್ನು ನೋಡಿ ಈ ನಾಯಿಮರಿ ಸತ್ತಿರಬಹುದೆಂದು ಕೊಂಡಿದ್ದರು. ಕೊನೆಗೆ ನಾಯಿಮರಿಯ ಹೃದಯವನ್ನು ಪರೀಕ್ಷಿಸಿದಾಗ, ಹೃದಯ ಬಡಿದುಕೊಳ್ಳುತ್ತಿದೆ ಎಂದು ತಿಳಿದು ತಕ್ಷಣವೇ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ಈ ವಿಡಿಯೋ ಹತ್ತೊಂಬತ್ತು ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದು, ನೆಟ್ಟಿಗರೊಬ್ಬರು, ‘ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಕೆಗೆ ಜೀವನ ಪರ್ಯಂತ ಋಣಿಯಾಗಿರಬೇಕು: ಎಂದಿದ್ದಾರೆ. ಮತ್ತೊಬ್ಬರು, ‘ತಾಯಿ ಶ್ವಾನಕ್ಕೆ ಸಹಾಯ ಮಾಡಿ ಅದರ ಮರಿಯ ಜೀವ ಉಳಿಸಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES