Friday, January 24, 2025

ಅಧರ್ಮದ ಜಗತ್ತನ್ನು ತೊರೆದು, ಸತ್ಯದ ಕಡೆ ಹೋಗುತ್ತಿದ್ದೇನೆ : ಪತ್ರ ಬರೆದಿಟ್ಟು ನಾಪತ್ತೆಯಾದ ವಿದ್ಯಾರ್ಥಿ !

ಬೆಂಗಳೂರು: ಅಧರ್ಮದ ಜಗತ್ತನ್ನ ತೊರೆದು ಸತ್ಯದ ಕಡೆ ಹೋಗುತ್ತಿದ್ದೇನೆ, ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಪತ್ರವನ್ನು ಬರೆದು ವಿಧ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಕಾಣೆಯಾಗಿರುವ ವಿದಾರ್ಥಿಯನ್ನು ಮೋಹಿತ್​ ಋಷಿ ಎಂದು ಗುರತಿಸಲಾಗಿದೆ.

ವಿದ್ಯಾರಣ್ಯಪುರದ ನಿವಾಸಿ ಅರ್ಜುನ್ ಕುಮಾರ್ ಎಂಬುವವರ ಪುತ್ರ ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ. ಆದರೆ ಜನವರಿ 16ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಯಲ್ಲೇ ಮೊಬೈಲ್ ಬಿಟ್ಟು ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ಪುಸ್ತಕದಲ್ಲಿ ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆ ಎಂದು  ಬರೆದಿದ್ದಾನೆ.

ಇದನ್ನೂ ಓದಿ : ಚೆಕ್​ಬೌನ್ಸ್​ ಪ್ರಕರಣ :ನಿರ್ದೇಶಕ ರಾಮ್​ಗೋಪಾಲ್​ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ !

ಮಗ ಕಾಣೆಯಾದ ಹಿನ್ನಲೆ ಪೋಷಕರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಸದ್ಯ ಉತ್ತರಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಮೋಹಿತ್​ ಪ್ರಯಾಗ್​ ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಹೀಗಾಗಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು. ಬಾಲಕನನ್ನು ಹುಡುಕಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ.

ಜೊತೆಗೆ ವಿದ್ಯಾರ್ಥಿಯ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಬಾಲಕ ಪೋಟೊವನ್ನು ಹಾಕಿ ಮಾಹಿತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

 

RELATED ARTICLES

Related Articles

TRENDING ARTICLES