ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಓರ್ವ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯರ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಮೃತ ಮಹಿಳೆಯನ್ನು ವಿಜಯಕುಮಾರಿ ಎಂದು ಗುರುತಿಸಲಾಗಿದೆ.
ನಾಗರಾಜ್ ಮತ್ತು ವಿಜಯ್ಕುಮಾರಿ ಕಳೆದ 9 ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದರು. ವಿಜಯಕುಮಾರಿ (39)ಎಮ್ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು . ಮದುವೆಯಾದಾಗಿಂದಲೂ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದ ಬಗ್ಗೆ ಆಕೆ ತನ್ನ ಮನೆಯವರ ಬಳಿ ಅಳಲು ತೊಡಿಕೊಂಡಿದ್ದಳಂತೆ.
ಇದನ್ನೂ ಓದಿ: ಕಾಲೇಜಿನ ಮೂರನೇ ಮಹಡಿಯಿಂದ ಜಿಗಿದು 16 ವರ್ಷದ ಬಾಲಕ ಆತ್ಮಹ*ತ್ಯೆ !
ಆದರೆ ನಿನ್ನೆ ಬೆಳಗಿನ ಜಾವ 11ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಕೇಳಿ ಬಂದಿದೆ. ಇನ್ನು ಪ್ರತಿ ದಿನ ಗಂಡ ನಾಗರಾಜ್ ಆಕೆಗೆ ಕಿರುಕುಳ ನೀಡುತ್ತಿದ್ದ ಈ ಹಿಂದೆ ಮಗುವಿನ ನಾಮಕರಣ ಸಂದರ್ಭದಲ್ಲಿ ಆಕೆಗೆ ಒಡವೆಗಳನ್ನು ತರುವಂತೆ ಒತ್ತಾಯ ಮಾಡಿದ್ದನಂತೆ ಈ ಬಗ್ಗೆ ವಿಜಯಕುಮಾರಿ ಮನೆಯವ್ರು ಆರೋಪಿಸಿದ್ದು ಕೋಡಿಗೆಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.