ಬೆಂಗಳೂರು : ಶ್ರೀರಾಮುಲು ಆರೋಪಕ್ಕೆ ಇಂದು ಮಾಧ್ಯಮ ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ನೀಡಿದ ಶಾಸಕ ಜನಾರ್ಧನ್ ರೆಡ್ಡಿ, ‘ ನಾನು ಸಾಯುವವರೆಗೂ ಶ್ರೀ ರಾಮುಲುನನ್ನು ಸ್ನೇಹಿತನಾಗಿಯೆ ನೋಡುತ್ತೇನೆ. ಪಕ್ಷ ಬಿಡೋದು ಅವರ ವೈಯಕ್ತಿಕ ವಿಶಯ ಇದರಲ್ಲಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಟಿ ಕರೆದು ಮಾತನಾಡಿದ ಜನಾರ್ಧನ್ ರೆಡ್ಡಿ ‘ ಶ್ರೀರಾಮುಲು ಬೇಕು ಅಂದ್ರು, ಬೇಡ ಅಂದ್ರು ಜನಾರ್ದನ ರೆಡ್ಡಿ ದೃಷ್ಟಿಯಲ್ಲಿ ಆತ ನನ್ನ ಸ್ನೇಹಿತನೇ. ನಾನು ಒಂದು ಬಾರೀ ಸ್ನೇಹ ಮಾಡಿದ್ರೆ ನಾನು ಯಾವತ್ತು ಶತ್ರು ತರ ನೋಡಲ್ಲ. ಆದರೆ ಶತ್ರು ಜೊತೆಗೆ ನಾನು ಸ್ನೇಹ ಮಾಡಿದ್ದೇನೆ ಅದೇ ವಿಪರ್ಯಾಸ.
ಸತೀಶ್ ಜಾರಕಿಹೋಳಿ ಸೋಲಿಸಲು, ಶ್ರೀರಾಮುಲನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುತ್ತಿದ್ದಾರೆ !
ನಿನ್ನೆ ಶ್ರೀ ರಾಮುಲು ಪಕ್ಷ ಬಿಡುತ್ತೇನೆ ಎಂದು ಹೇಳಿದ್ದರು, ಅದು ತಪ್ಪು. ನನ್ನ ಮೇಲೆ ಆರೋಪ ಮಾಡಿ ಪಕ್ಷ ಬಿಡುತ್ತಿರುವುದು ತಪ್ಪು. ನಾನು 40 ವರ್ಷ ಆತನಿಗಾಗಿ ಮಾಡಿರೋದು ನೆನಪಿಸಿಕೊಳ್ಳದೇ ಈ ರೀತಿ ಆರೋಪ ಮಾಡೋದು ತಪ್ಪು. ರಮೇಶ್ ಜಾರಕಿಹೊಳಿ ಸೋಲಿಸಲು ಡಿಕೆಶಿ ಶ್ರೀರಾಮುಲು ಸೆಳೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ : 10ಕ್ಕೂ ಹೆಚ್ಚು ಜನರಿಗೆ ಗಾಯ !
ನಾನು ಕರ್ಮವನ್ನು ನಂಬಿದ್ದೇನೆ, ಆ ದೇವರಿಗೆ ಎಲ್ಲವನ್ನು ಬಿಡುತ್ತೇನೆ. ಕರ್ಮ ಯಾರನ್ನು ಸುಮ್ಮನೆ ಬಿಡೊದಿಲ್ಲ. ಶ್ರೀ ರಾಮುಲು ಡಿಕೆಶಿ ಸಂಪರ್ಕದಲ್ಲಿದ್ದಾರೆ ಎನ್ನುವುದು ಮಾಧ್ಯಮದಲ್ಲಿ ನೋಡಿದ್ದೇನೆ ಇದರ ಬಗ್ಗೆ ನನಗೆ ಗೊತ್ತಿಲ್ಲ. ವಿಜಯೇಂದ್ರ ಅವರಿಗೆ ರಾಜ್ಯಧ್ಯಕ್ಷ ಸ್ಥಾನ ಕೊಟ್ಟಿರುವುದು ಹೈಕಮಾಂಡ್, ಯಾರೋ ನಾಲ್ಕು ಜನ ವಿರೋಧ ಮಾಡ್ತಾರೆ ಎಂದು ಈ ರೀತಿ ಮಾತನಾಡುವುದು ಸರಿಯಲ್ಲ.