ಗದಗ : ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರಿಸಿ ಕೇಕೆಹಾಕುತ್ತಿದೆ. ಇದರ ವಿರುದ್ಧ ಆರೋಗ್ಯ ಇಲಾಖೆ, ಪೊಲಿಸ್ ಇಲಾಖೆ, ಪೌರ ಕಾರ್ಮಿಕರು ಸೇರಿದಂತೆ ಅನೇಕರು ವಾರಿಯರ್ಸ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷ ಅಂದ್ರೆ ಪೌರ ಕಾರ್ಮಿಕರ ಸೇವೆ ಇಲ್ಲಿ ಅನನ್ಯ, ಯಾವುದೇ ರೋಗ ರುಜಿನಗಳು ಹರಡದಂತೆ ಕಾರ್ಮಿಕರು ಸಂಪೂರ್ಣ ನಗರವನ್ನು ಸ್ವಚ್ಛವಾಗಿಡುವಲ್ಲಿ ಶ್ರಮಿಸುತ್ತಾರೆ. ಹೀಗಾಗಿ ಇಂಥಹ ಕೊರೊನಾ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಕುಟುಂಬವನ್ನೂ ಲೆಕ್ಕಿಸದೇ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಗದಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಇಂದು ನಗರಸಭೆ ಪೌರಕಾರ್ಮಿಕರ ಆರೋಗ್ಯ ಪರೀಕ್ಷೆ ನಡೆಸಿತು. ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಬಿಪಿ, ಶುಗರ್, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಸ್ವ್ಯಾಬ್ ಟೆಸ್ಟ್ ಮಾಡಲಾಯಿತು.
ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಈ ಕಿಟ್ ಧರಿಸಿ ಪ್ರತಿಯೊಬ್ಬರ ಸ್ವ್ಯಾಬ್ ಕಲೆಕ್ಟ್ ಮಾಡಿದ್ರು. ನಂತರ ಚೆಕಪ್ ಮಾಡಿದ ಕೊಠಡಿ ಹಾಗೂ ಕಾರ್ಮಿಕರು ಸೇರಿದ್ದ ಸ್ಥಳವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಇಡೀ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಆರೋಗ್ಯ ಕಾಳಜಿಗೆ ಮುಂದಾದ ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೌರಕಾರ್ಮಿಕರಿಗೂ ಕೊರೊನಾ ಟೆಸ್ಟ್..!
TRENDING ARTICLES