Wednesday, January 22, 2025

ಬೆಂ-ಮೈ ರಸ್ತೆಯಲ್ಲಿ ದರೋಡೆ ಆರೋಪ : ಗಾರೆ ಕೆಲಸದವರು ರಸ್ತೆ ದಾಟುತ್ತಿದ್ದರು ಎಂದ ಪೊಲೀಸರು !

ರಾಮನಗರ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ದರೋಡೆ ನಡೆಸಲು ಯತ್ನಿಸುತ್ತಿದ್ದಾರೆ ಎಂಬ ವಿಚಾರದ ಕುರಿತು ಸ್ಪಷ್ಟನೆ ನೀಡಿರುವ ರಾಮನಗರ ಪೊಲೀಸರು, ರಾತ್ರಿ ವೇಳೆ ಗಾರೆಕೆಲಸದವರು ರಸ್ತೆ ದಾಟಲು ಸಾರ್ವೆ ಮರ ಹಿಡಿದು ರಸ್ತೆ ದಾಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿತ್ತು. ಈ ವಿಡಿಯೋದಲ್ಲಿ ಬೆಂಗಳೂರು ಮತ್ತು ಮೈಸೂರು ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ರಸ್ತೆಯಲ್ಲಿ ಸಾರ್ವೆ ಮರವನ್ನು ಅಡ್ಡವಿಟ್ಟು ದರೋಡೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ : ‘ಮುಂದಿನ ಮುಖ್ಯಮಂತ್ರಿ ಸತೀಶ್​ ಜಾರಕಿಹೋಳಿ’ : ದೇವರ ಮೊರೆ ಹೋದ ಅಭಿಮಾನಿಗಳು !

ಇದೀಗ ಈ ವಿಡಿಯೋ ಬಗ್ಗೆ ರಾಮನಗರ ಪೊಲೀಸರು ಫ್ಯಾಕ್ಟ್​ ಚೆಕ್​ ಮಾಡಿ ಸ್ಪಷ್ಟನೆ ನೀಡಿದ್ದು. ‘ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೇ ಹೆದ್ದಾರಿಯಲ್ಲಿ ಪ್ರಯಾಣಿಸಬಹುದು ಎಂದು ಪ್ರಕಟಣೆ ಹೊರಡಿಸಿದ್ದಾರೆ ಹಾಗೂ ಗಾರೆ ಕೆಲಸದವರು ಸಾರ್ವೆ ಮರವನ್ನು ಅಡ್ಡವಾಗಿಟ್ಟು ರಸ್ತೆ ದಾಟತ್ತಿದ್ದರು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES