ಬೆಳಗಾವಿ : ರಾಜ್ಯದಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೈ ನಾಯಕರ ಟಾಕವಾರ್ಗೆ ಕಡಿವಾಣ ಬಿದ್ದಿದೆ. ಆದರೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲೀ ಎಂದು ಅಭಿಮಾನಿಗಳು ದೇವರ ಮೊರೆ ಹೋಗ್ತಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಮೊರೆ ಹೋಗಿದ್ದ ಅಭಿಮಾನಿಗಳು. ಈಗ ಸಿಗಂಧೂರ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದಷ್ಟು ಬೇಗ ಸತೀಶ್ ಜಾರಕಿಹೊಳಿ ಸಿಎಂ ಆಗಿಲಿ ಎಂದು ತಾಯಿ ಸಿಗಂಧೂರ ಚೌಡೇಶ್ವರಿಗೆ ಹರಿಕೆ ಹೊತ್ತು ಬಂದಿದ್ದಾರೆ.
ಹೌದು..ರಾಜ್ಯದಲ್ಲಿ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಮುಂದುವರಿದಿದೆ. ಇದೇ ಸಂದರ್ಭದಲ್ಲಿ ಮತ್ತೆ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲೀ ಅಂತಾ ಕೂಗು ಜೋರಾಗ್ತಿದೆ. ಕಳೆದ ಸಂಕ್ರಾಂತಿ ಹಬ್ಬದಂತೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲೀ ಎಂದು ಅಭಿಮಾನಿಯೊಬ್ಬ ಹರಿಕೆ ಹೊತ್ತಿದ್ದು ಸದ್ದು ಮಾಡಿತ್ತು. ಈಗ ಮತ್ತೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ, ಎಂದು ಶಿವಮೊಗ್ಗ ಜಿಲ್ಲೆಯ ಸಿಗಂಧೂರ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾಯಿ ಚೌಡೇಶ್ವರಿ ದೇವಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಕೈಯಲ್ಲಿ ಸತೀಶ್ ಜಾರಕಿಹೊಳಿ ಭಾವಚಿತ್ರ ಇರೋ ಬಿತ್ತಿಪತ್ರ ಹಿಡಿದು ವಿಶೇಷ ಪೂಜೆ ಸಲ್ಲಿದ್ದಾರೆ.
ಇದನ್ನೂ ಓದಿ : ನಡೆಯಲಾಗದೆ ಕುಂಟುತ್ತಾ ಏರ್ಪೋರ್ಟ್ ಗೆ ಬಂದ ರಶ್ಮಿಕಾ : ಶ್ರೀವಲ್ಲಿಗೆ ಏನಾಯಿತು ಎಂದ ಫ್ಯಾನ್ಸ್ !
ಇನ್ನೂ ಸತೀಶ್ ಜಾರಕಿಹೊಳಿ ವರ್ಸಸ್ ಡಿ.ಕೆ.ಶಿವಕುಮಾರ್ ಮಧ್ಯದ ಕೋಲ್ಡವಾರ್ಗೆ ತಣ್ಣಗಾಗಿದೆ. ಆದರೆ ಜಾರಕಿಹೊಳಿ ಡಿಕೆಶಿ ಬೆಂಬಲಿಗರು, ಅಭಿಮಾನಿಗಳು ಮಾತ್ರ ನಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಹೇಳ್ತಿದ್ದಾರೆ. ನಿನ್ನೆಯಷ್ಟೇ ನಡೆದ ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ಬೆಂಬಲಿಗರು ಕೈಯಲ್ಲಿ ಭಾವಚಿತ್ರ ಹಿಡಿದು ಮುಂದಿನ ಸಿಎಂ ಎಂದು ಘೋಷಣೆ ಹಾಕಿದ್ದರು. ಈಗ ಸತೀಶ್ ಜಾರಕಿಹೊಳಿ ಬೆಂಬಲಿಗರು, ಅಭಿಮಾನಿಗಳು, ಕಾಂಗ್ರೆಸ್ ಘಟಕದ ಮುಖಂಡರು ಸಿಗಂಧೂರ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಡಿಕೆಶಿ ಜಾರಕಿಹೊಳಿ ತಮ್ಮ ಬಾಯಿಗೆ ಬೀಗ ಹಾಕಿಕೊಂಡ್ರು ಸಹ ಅವರ ಬೆಂಬಲಿಗರ ಸಿಎಂ ಘೋಷಣೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ವಿಸ್ವಲ್ಸ್ ಪ್ಲೋ
ಒಟ್ಟಿನಲ್ಲಿ ರಾಜ್ಯದಲ್ಲಿ ಸಿಎಂ, ಡಿಸಿಎಂ ಬದಲಾವಣೆ ಇಲ್ಲವೇ ಇಲ್ಲ ಅಂತಾ ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಸುರ್ಜೇವಾಲಾ ಹೇಳಿದ್ದಾರೆ. ಆದ್ರೆ ಅತ್ತ ರಾಜ್ಯದಲ್ಲಿ ಡಿಕೆಶಿ ಸತೀಶ್ ಜಾರಕಿಹೊಳಿ ಬೆಂಬಲಿಗರ ಸಿಎಂ ಕೂಗು ಮಾತ್ರ ನಿಲ್ಲುತ್ತಿಲ್ಲ.