ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ, ನ್ಯಾಷನಲ್ ಕ್ರಷ್ ಎಂದೆ ಖ್ಯಾತರಾಗಿರುವ ನಟಿ ರಷ್ಮಿಕಾ ಮಂದಣ್ಣ, ಇತ್ತೀಚಿಗೆ ಬಿಮ್ನಲ್ಲಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು. ಇದರಿಂದಾಗಿ ನಡೆಯಲು ಕಷ್ಟ ಪಡುವ ಸ್ಥಿತಿಯಲ್ಲಿ ಇಂದು(ಜ.22) ವಿಮಾನ ನಿಲ್ಧಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ನಿಂದ ಕುಂಟುತ್ತಾ ಇಳಿದು, ವೀಲ್ಚೇರ್ನಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಕಾಲು ನೋವಿನ ನಡುವೆಯೂ ಒಪ್ಪಿಕೊಂಡಿರುವ ಸಿನಿಮಾ ಕೆಲಸ ಮಾಡಲು ಹೈದರಾಬಾದ್‌ನಿಂದ ಮುಂಬೈಗೆ ಅವರು ತೆರಳಿದ್ದಾರೆ. ಈ ವೇಳೆ ಕುಟುಂತ ಹರಸಾಹಸ ಪಟ್ಟಿರುವುದು ಕಂಡು ಬಂದಿದೆ.
ಇದನ್ನೂ ಓದಿ : 4 ಮಕ್ಕಳಿದ್ದ ಆಂಟಿಗೆ ಪೋನ್ ಮಾಡುತ್ತಿದ್ದ ಯುವಕನ ಬೆತ್ತಲೆ ಮಾಡಿ, ಹಲ್ಲೆ ನಡೆಸಿದ ಕುಟುಂಬಸ್ಥರು !
ಈ ವಿಡಿಯೋ ನೋಡಿದ ರಷ್ಮಿಕಾ ಅಭಿಮಾನಿಗಳು, ತಮ್ಮ ನೆಚ್ಚಿನ ನಟಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.