Monday, January 13, 2025

ನವವಿವಾಹಿತನಿಂದ ಗ್ರಾಮದಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು..!

ಬಾಗಲಕೋಟೆ : ಜಿಲ್ಲೆಯ ಕಲಾದಗಿ ಗ್ರಾಮದ ಅಬಕಾರಿ ಇಲಾಖೆಯ ನೌಕರ. ಗ್ರಾಮದಲ್ಲಿ ಜೂನ್ 13ರಂದು ಆರತಕ್ಷತೆ ಕಾರ್ಯ ನಡೆಯಿತು. ಆ ಕಾರ್ಯಕ್ಕೆ ಬಂದವರಿಗೆಲ್ಲ ಇಂದು ಕೊರೋನಾ ಪಾಜಿಟಿವ್ ದೃಡ ಪಡುತ್ತಿದೆ. ಗ್ರಾಮದಲ್ಲಿ ನವವಿವಾಹಿತನಿಂದ 30 ಕ್ಕೂ ಹೆಚ್ಚು ಜನರಿಗೆ ಕೊರೋನಾ ತಗುಲಿದ್ದು, ನವವಿವಾಹಿತ ಸೋಂಕಿತ ಈಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ ಇದೀಗ ವಿಪತ್ತು ನಿರ್ವಹಣಾ ಕಾಯ್ದೆ -2005 ರ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ವಿವಾಹಿತ,ಆತನ ತಂದೆ,ತಾಯಿ ವಿರುದ್ಧ ಇಂದು ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲಾದಗಿ ಗ್ರಾಮದಲ್ಲಿ ರಿಸೆಪ್ಷನ್ ಕಾರ್ಯ ಮಾಡಿದ್ದೆ ಸೋಂಕು ಹರಡಲು ಕಾರಣವಾಗಿದೆ. ಗ್ರಾಮದ ಮೂನ್ನೂರಕ್ಕೂ ಹೆಚ್ಚು ಜನರನ್ನ ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಪಡಿಸಿದ್ದು, ಪ್ರತಿದಿನ ಸೋಂಕಿತರ ಪ್ರಕರಣಗಳು ದಾಖಲಾಗ್ತಿವೆ. ಗ್ರಾಮದಲ್ಲಿ ರ್ಯಾಂಡಮ್ ಸ್ಯಾಂಪಲ್ ಕಲೆ ಹಾಕುವ ಕಾರ್ಯ ಮಾಡ್ತಿದ್ದಾರೆ.
ಇನ್ನು ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಲಾದಗಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನವು ನವವಿವಾಹಿತನ ಸಂಪರ್ಕ ಹೊಂದಿದ 5-6 ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಈಡೀ ಗ್ರಾಮಕ್ಕೆ ಮದುವೆ ಕಂಠಕವಾಗಿದೆ. ಕಲಾದಗಿ ಗ್ರಾಮದ ಸೋಂಕು ಜಿಲ್ಲೆಯಲ್ಲಿ ವ್ಯಾಪಕಾವಾಗಿ ಹರಡಿದ್ದು ಸೋಂಕಿತರ ಸಂಖ್ಯೆ ದ್ವೀಗುಣ ವಾಗುತ್ತಾ ಸಾಗುತ್ತಿದೆ.

RELATED ARTICLES

Related Articles

TRENDING ARTICLES