ಮೈಸೂರು:‘ ನನ್ನ ಮೇಲೆ ಆಗಲಿ ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಂ ಬೇಕು, ಪಕ್ಷದಿಂದ ಸಸ್ಪೆಂಡ್ ಮಾಡೋಕೆ ಡಿಸ್ಮಿಸ್ ಮಾಡೋಕೆ ತಾಖತ್ ಇರಬೇಕು ಎಂದು ಹೇಳಿದರು.
ಇದನ್ನೂ ಓದಿ: ದೆಹಲಿ ಚುನಾವಣೆ ದಿನವೇ ಪ್ರಧಾನಿ ಮೋದಿ ಕುಂಭಮೇಳಕ್ಕೆ ಭೇಟಿ !
ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿಟಿ ದೇವೇಗೌಡ ಇಂದು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಮಾತನಾಡಿದ ಶಾಸಕ ಜಿಟಿಡಿ ‘ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ತಾಕತ್ ನಾಯಕರಲಿಲ್ಲ. ಜನ ಕಟ್ಟುವ ತಾಕತ್ ಇರೋನು ಸಸ್ಪೆಂಡ್ ಮಾಡುತ್ತಾನೆ. ಆದರೆ ನಾಯಕರಿಗೆ ಈ ತಾಕತ್ ಇಲ್ಲ. ಅದಕ್ಕೆ ಉಚ್ಚಾಟನೆ ಮಾಡುತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಜಿಟಿಡಿ !
ಮೂಡಾ ಹಗರಣ ವಿಚಾರವಾಗಿ ಮಾತನಾಡಿದ ಜಿಟಿಡಿ ‘ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ
ಯಾವ ಪಕ್ಷದ ಯಾವ ನಾಯಕರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಗೊತ್ತಾ ? ಸಿದ್ದರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು. ನ್ಯಾಯಾಲಯದ ತೀರ್ಮಾನ ಬರಲಿ. ಆಮೇಲೆ ನೋಡೋಣಾ, ತಮ್ಮ ಪಕ್ಷದಲ್ಲಿ ಯಾರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಎಂಬುದನ್ನು ನಾಯಕರುಗಳು ಮೊದಲು ನೋಡಿಕೊಂಡು ನಂತರ ಸಿದ್ದರಾಮಯ್ಯರ ರಾಜೀನಾಮೆ ಕೇಳಲಿ ಎಂದು ಹೇಳಿದರು.