Wednesday, January 22, 2025

ATM ದರೋಡೆ ಪ್ರಕರಣ : ‘ನನಗೆ ಪುರ್ನಜನ್ಮ ಸಿಕ್ಕಿದೆ’ ಎಂದ ಗಾಯಾಳು ಸಿಬ್ಬಂದಿ !

ಬೀದರ್ : ಜಿಲ್ಲೆಯಲ್ಲಿ ನಡೆದಿರುವ ಎಟಿಎಂ ದರೋಡೆ ಮತ್ತು ಹತ್ಯೆ ಪ್ರಕರಣ ಕೇವಲ ರಾಜ್ಯವಲ್ಲದೆ, ದೇಶವೆಲ್ಲೆಡೆ ಸದ್ದು ಮಾಡಿತ್ತು. ಇದೀಗ ಈ ಘಟನೆಯಲ್ಲಿ ದರೋಡೆಕೋರರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಬ್ಬಂದಿ ಶಿವಕುಮಾರ್​ ಗುನ್ನಳ್ಳಿ ಮೊದಲ ಪ್ರತಿಕ್ರಿಯೆ ನೀಡಿದ್ದು. ನನಗೆ ಪುರ್ನಜನ್ಮ ಸಿಕ್ಕಿದಂತಾಗಿದೆ ಎಂದು ಹೇಳಿದ್ದಾರೆ.

ಹೈದ್ರಾಬಾದ್‌ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್ಮ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು. ಘಟನೆಯ ಬಗ್ಗೆ ವಿವರಿಸಿದ್ದಾರೆ ‘ಬ್ಯಾಂಕ್‌ನಿಂದ ಹಣದ ಟ್ರಂಕ್ ತೆಗೆದುಕೊಂಡು ಬಂದ್ವಿ, ಡೈರೆಕ್ಟ್ ಶೂಟ್ ಮಾಡೋಕೆ ಶುರು ಮಾಡಿದ, ನನ್ನ ಮೇಲೆ ಮೂರ್ನಾಲ್ಕು ಗುಂಡು ಹಾರಿಸಿದರು, ಅದರಲ್ಲಿ ಎರಡ್ಮೂರು ಗುಂಡು ಮಿಸ್​ ಆದವು. ಆದರೆ ಒಂದು ಗುಂಡು ಎದೆಗೆ ಬಿತ್ತು. ನಾನು ಅಲ್ಲಿಯೆ ಕುಸಿದು ಬಿದ್ದೆ. ಹಣದ ಟ್ರಂಕ್​ ಉಳಿಸಲು ಹೋಗಿ ಈ ರೀತಿ ಆಯ್ತು’ ಎಂದು ಹೇಳಿದರು.

ಇದನ್ನೂ ಓದಿ :ಮೈಕ್ರೋ ಫೈನಾನ್ಸ್​ ಕಿರುಕುಳದಿಂದ ಬೇಸತ್ತ ಯುವಕ ಆತ್ಮಹ*ತ್ಯೆ !

ಮುಂದುವರಿದು ಮಾತನಾಡಿದ ಶಿವಕುಮಾರ್ ‘ ಯಾರೋ ಹಣದ ಟ್ರಂಕ್​ ಎತ್ತಿಕೊಂಡು ಹೋಗಲು ಯತ್ನಿಸಿದ, ಈ ವೇಳೆ ನನ್ನ ಮೇಲೆ ಕಾರದ ಪುಡಿ ಎರಚಿದರು. ಆದರೆ ನಾನು ದೂರ ಸರಿದೆ. ಈ ವೇಳೆ ನಾನ್​ಸ್ಟಾಪ್​ ಗುಂಡು ಹಾರಿಸಿದರು. ಈ ವೇಳೆ ನಾನು ಗನ್​ಮ್ಯಾನ್​, ಗನ್​ಮ್ಯಾನ್​ ಎಂದು ಕೂಗಿದೆ. ಆದರೆ ನಮ್ಮ ಗನ್​ಮ್ಯಾನ್​ ಇರಲಿಲ್ಲ. ಬೇರೆ ಗನ್​ಮ್ಯಾನ್​ ಇದ್ದರು. ಆದರೆ ನನಗೆ ಅಂದು ಪುನರ್ಜನ್ಮ ಸಿಕ್ಕಿದೆ ಎಂದು ಶಿವಕುಮಾರ್ ಜನವರಿ 16ರಂದು ನಡೆದ ಘಟನೆ ಬಗ್ಗೆ ವಿವರಿಸಿದರು.

RELATED ARTICLES

Related Articles

TRENDING ARTICLES