Wednesday, January 22, 2025

ಮೈಕ್ರೋ ಫೈನಾನ್ಸ್​ ಹಾವಳಿ : ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಮಹಿಳೆ ನೇಣಿಗೆ ಶರಣು !

ರಾಮನಗರ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್​ಗಳ ಹಾವಳಿ ಮುಂದುವರಿದಿದೆ. ಫೈನಾನ್ಸ್ ಕಾಟಕ್ಕೆ ಜನರು ಊರು ತೊರೆಯುತ್ತಿರೋದು ಒಂದು ಕಡೆಯಾದರೆ ಮತ್ತೊಂದೆಡೆ ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಸಾಲಗಾರರ ಕಿರುಕುಳಕ್ಕೆ ಮಹಿಳೆಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಫೈನಾನ್ಸ್ ಕಾಟ ತಪ್ಪಿಸುವಂತೆ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ರಾಮನಗರದ ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋದಮ್ಮ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯಶೋದಮ್ಮ ಸುಮಾರು ಎಂಟು ಖಾಸಗಿ ಫೈನಾನ್ಸ್ ಕಂಪನಿಗಳಿಂದ 5 ಲಕ್ಷ ಸಾಲ ಪಡೆದಿದ್ದರು.

ಇದನ್ನೂ ಓದಿ: ಶಾಲಾ ಕಚೇರಿಯಲ್ಲೇ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್ : ವಿಡಿಯೋ ವೈರಲ್‌!

ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೀಡಾದ ಹಿನ್ನೆಲೆ ಸರಿಯಾಗಿ ಕೆಲಸಕ್ಕೆ ಹೋಗದೇ ಸಾಲ ಮರುಪಾವತಿ ಮಾಡಿರಲಿಲ್ಲ. ಎರಡು ತಿಂಗಳು ಸಾಲ ಬಾಕಿ ಉಳಿಸಿಕೊಂಡ ಹಿನ್ನೆಲೆ ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಬಳಿ ಬಂದು ಗಲಾಟೆ ನಡೆಸಿ ಇನ್ನೆರಡು ದಿನದಲ್ಲಿ ಸಾಲ ಕಟ್ಟಲಿಲ್ಲ ಅಂದರೆ ಮನೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಬೇಸತ್ತ ಯಶೋದಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನೂ ಗ್ರಾಮದಲ್ಲಿ ಹಲವು ಮಂದಿ ಇದೇರೀತಿ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದು ನಿತ್ಯ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಗ್ರಾಮಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದೆನೆ ಮಾಡಿ ಮನೆ ಜಪ್ತಿಮಾಡಿವ ಬೆದರಿಕೆ ಹಾಕ್ತಿದ್ದಾರೆ. ಅಲ್ಲದೇ ಒಂದು ಫೈನಾನ್ಸ್ ನಿಂದ ಸಾಲ ತೀರುವ ಮುನ್ನವೇ ಮತ್ತೊಂದು ಫೈನಾನ್ಸ್ ನವರು ಹಣ ಕೊಡ್ತೀವಿ ಅಂತ ಜನರಿಗೆ ಸಾಲ ನೀಡಿ ಅಧಿಕ ಬಡ್ಡಿ ಹಾಕ್ತಿದ್ದಾರೆ. ಅಲ್ಲದೇ ನಾಲ್ಕು ಜನ ಮಹಿಳೆಯರನ್ನ ಸೇರಿಸಿ ಒಂದು ಗುಂಪು ಮಾಡಿ ಸಾಲ ಕೊಡ್ತಾರೆ. ಒಬ್ಬರು ಸಾಲ ಕಟ್ಟದಿದ್ದರೆ ಉಳಿದ ಮೂರು ಮಂದಿಗೆ ಆ ಸಾಲ ಕಟ್ಟುವಂತೆಯೂ ಫೈನಾನ್ಸ್ ಸಿಬ್ಬಂದಿ ಒತ್ತಡ ಹೇರಿ ಮಾನಸಿಕ ಕಿರುಕುಳ ಕೊಡ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಈ ಮೈಕ್ರೋ ಫೈನಾನ್ಸ್ ಭೂತಕ್ಕೆ ಜನ ಕಂಗಾಲಾಗಿದ್ದು, ಖಾಸಗಿ ಫೈನಾನ್ಸ್ ಕಿರುಕುಳ ತಪ್ಪಿಸುವಂತೆ ಅಳಲು ತೋಡಿಕೊಳ್ತಿದ್ದಾರೆ. ಸರ್ಕಾರ ಇಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES