Wednesday, January 22, 2025

ದರ್ಶನ್​ ಗನ್​ ಲೈಸೆನ್ಸ್ ಅಮಾನತು : ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದ ಕಮಿಷನರ್​ !

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ಗೆ ನೀಡಿದ್ ಗನ್​ ಲೈಸೆನ್ಸ್​ನನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್​ ಕಮೀಷನರ್​ ದಯಾನಂದ ತಿಳಿಸಿದ್ದು. ದರ್ಶನ್​ ಮೇಲೆ ಗಂಭೀರ ಆರೋಪಗಳು ಇರುವುದರಿಂದ ಆತನ ಗನ್​ ಲೈಸೆನ್ಸ್​​ನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರೊದು ಎಲ್ಲಿಯೂ ಕಂಡುಬರದ ಕಾರಣ ತಾತ್ಕಾಲಿಕವಾಗಿ ಅಂದರೆ ಕೇಸ್ ಮುಗಿಯುವತನಕ ಅಮಾನತ್ತಿನಲ್ಲಿಡಲು ಪೊಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಒಂಟಿ ಸಲಗದ ಸೌಂದರ್ಯಕ್ಕೆ ಫಿದಾ ಆದ ಪ್ರವಾಸಿಗರು : ನೀವು ನೋಡಿ..!

ಈಗಾಗಲೇ ನಟ ದರ್ಶನ್​ ಬಳಿಯಿರುವ ಗನ್​ ಬಗ್ಗೆ ಪೊಲೀಸರು ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರಿಸಿದ್ದ ನಟ ದರ್ಶನ್​ ನಾನು ಸೆಲಬ್ರಟಿಯಾಗಿದ್ದು. ನಾನು ಎಲ್ಲಿಯಾದರು ಭೇಟಿಯಾದರೆ, ಅಲ್ಲಿ ಹೆಚ್ಚಿನ ಜನರು ಸೇರುತ್ತಾರೆ. ಈ ಕಾರಣದಿಂದ ನನಗೆ ಗನ್​ ಅವಶ್ಯಕತೆ ಇದೆ ಎಂದು ಹೇಳಿದ್ದರು. ಆತ್ಮರಕ್ಷಣೆಗೆ ಗನ್​ ಬೇಕಿದೆ ಎಂದು ಉತ್ತರಿಸಿದ್ದರು.

ಆದರೆ ಇದೀಗ ಪೊಲೀಸ್ ಕಮಿಷನರ್​ ದಯಾನಂದ ಈ ಗೊಂದಲಕ್ಕೆ ತೆರೆ ಎಳೆದಿದ್ದು. ನಟ ದರ್ಶನ್​ ಗಂಭೀರ ಪ್ರಕರಣದಲ್ಲಿ ಭಾಗವಹಿಸಿದ್ದು. ಗನ್​ ವಾಪಾಸು ತಂದು ಒಪ್ಪಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES