ಹುಬ್ಬಳ್ಳಿ : ಬೀದರ್ ದರೋಡೆ ಪ್ರಕರಣ, ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಬ್ಯಾಂಕ್ಗೆ ಖನ್ನ ಹಾಕುವ ವಿಫಲ ಯತ್ನ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ.
ಹೌದು.. ರಾಜ್ಯದಲ್ಲಿ ದಿನೇ ದಿನೇ ದರೋಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಖದೀಮರು ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದಕ್ಕೆ ಕೈಗನ್ನಡಿಯಾಗಿ ಬೀದರ್ ಮತ್ತು ಮಂಗಳೂರಿನಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿ ಕೋಟ್ಯಾಂತರ ರೂ ಮೌಲ್ಯದ ನಗದು, ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ. ಇಂತಹದೆ ಮತ್ತೊಂದು ವಿಫಲ ಪ್ರಯತ್ನ ಹುಬ್ಬಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: ಆಸ್ಪತ್ರೆ ಶವಗಾರದಲ್ಲಿ ತಂದೆ , ಮದುವೆ ಸಂಭ್ರಮದಲ್ಲಿ ಮಗಳು : ಏನಿದು ಹೃದಯಾವಿದ್ರಾವಕ ಘಟನೆ
ನಿನ್ನೆ ರಾತ್ರಿ ಹುಬ್ಬಳ್ಳಿಯ ನವನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ಗೆ ಖನ್ನ ಹಾಕಲು ಖದೀಮರು ಯತ್ನಿಸಿದ್ದಾರೆ. ಎಪಿಎಂಸಿ ಆವರಣದಲ್ಲಿರುವ ಕೆನರಾ ಬ್ಯಾಂಕ್ ಬೀಗ ಮುರಿದು ಬ್ಯಾಂಕ್ಗೆ ಖನ್ನ ಹಾಕಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗದಿದ್ದಾಗ ಅಲ್ಲಿಂದ ತೆರಳಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ನವನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿರುವವರನ್ನು ಬಂಧಿಸಿಲು ಶೋಧಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.